ಯೋಧರ ಮಾತಾಪಿತ್ರರಿಗೆ ಗೌರವಾರ್ಪಣೆ
ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಎಸ್‌ಟಿ ಮೋರ್ಚ ಉಡುಪಿ ನಗರ ಇದರ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ದೇಶದ ಗಡಿ ಕಾಯುವ ಯೋಧರ ಮಾತಾ ಪಿತ್ರರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮವನ್ನು ಉಡುಪಿಯ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಯಿತು.
ರಾಜಸ್ಥಾನದ ಕೋಟಾದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಣಿಪಾಲದ ಈಶ್ವರ ನಗರ ನಿವಾಸಿ ಕಾರ್ತಿಕ್ ಕೆ. ಪೂಜಾರಿ ಹೆತ್ತವರಾದ ಜಯಂತಿ ಮತ್ತು ಕರುಣಾಕರ್ ಪೂಜಾರಿ ದಂಪತಿ, ಹಿರಿಯಡ್ಕ ನಿವಾಸಿ ಯೋಧ ಕುಜಂಬೈಲ್ ಹರಿಕೃಷ್ಣರವರ ಹೆತ್ತವರಾದ ಸುಂದರಿ ಮತ್ತು ಉಪೇಂದ್ರ ನಾಯಕ ದಂಪತಿ, ಉಡುಪಿ ಬೈಲೂರು ಕೊಳಂಬೆಯ ಯೋಧ ಸಹೋದರ ರಾದ ರೋಷನ್ ಮತ್ತು ರಂಜನ್ ಹೆತ್ತವರಾದ ಬೇಬಿ ಮತ್ತು ಕೃಷ್ಣ ಪೂಜಾರಿ ದಂಪತಿ, ಹಿರಿಯಡ್ಕ ಒಂತಿಬೆಟ್ಟುವಿನ ಯೋಧ ಸುರೇಶ್ ಶೆಟ್ಟಿ ಹೆತ್ತವರಾದ ಸುಜಾತ ಮತ್ತು ಭೋಜ ಶೆಟ್ಟಿ ದಂಪತಿಯನ್ನು ಅವರ ನಿವಾಸದಲ್ಲಿ ಗೌರವಿಸ ಲಾಯಿತು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷ ಉಮೇಶ್ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಸದಸ್ಯರಾದ ಮಂಜುನಾಥ ಮಣಿಪಾಲ, ಅಶೋಕ್ ನಾಯ್ಕ, ಎಸ್‌ಟಿ ಮೋರ್ಚಾದ ಪದಾಧಿಕಾರಿಗಳಾದ ಸುಗುಣ ನಾಯ್ಕ, ಸುಮ ನಾಯ್ಕ, ರಾಹುಲ್ ನಾಯ್ಕ, ಗಿರೀಶ್ ನಾಯ್ಕ, ಉಡುಪಿ ಸೈನಿಕರ ವೇದಿಕೆ ಮಾಜಿ ಅಧ್ಯಕ್ಷ ಗಣಪಯ್ಯ ಸೇರಿಗಾರ್ ಹಾಜರಿದ್ದರು. ಮೋರ್ಚಾ ಅಧ್ಯಕ್ಷೆ ಸುಮಲತಾ ಕಾರ್ಯಕ್ರಮ ಸಂಯೋಜಿಸಿದರು.