ಉಡುಪಿ ಜಿಲ್ಲಾ ಕಾಂಗ್ರೆಸ್ ಮಾಸಿಕ ಸಭೆ
ಉಡುಪಿ: ಬೆಳಗಾವಿಯಲ್ಲಿ ಈ ತಿಂಗಳು ನಡೆಯುವ ಗಾಂಧಿ ನಡಿಗೆ ಕಾಂಗ್ರೆಸ್ ಸಮಾವೇಶಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದಲೂ ಕಾರ್ಯಕರ್ತರು ಹಾಗೂ ನಾಯಕರು ತೆರಳಲು ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಸೂಚನೆಗಳನ್ನು ನೀಡಿದರು.
ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವೂರು, ಮುಂದೆ ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನಗರ ಸಭಾ ಚುನಾವಣೆ ಎದುರಿಸಲು ನಾವು ಈಗಲೇ ಸನ್ನದ್ಧರಾಗಬೇಕೆಂದು ವಿವರಿಸಿದರು.
ಡಿ.27ರಂದು ಬೆಳಗಾವಿಯಲ್ಲಿ ನಡೆಯುವ ಗಾಂಧಿ ನಡಿಗೆ ಕಾಂಗ್ರೆಸ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ತಿಳಿಸಿದರು. ಈ ಬಗ್ಗೆ ನಾಯಕರಾದ ಉದಯ ಶೆಟ್ಟಿ ಮುನಿಯಾಲ್, ಪ್ರಸಾದ್ ರಾಜ್ ಕಾಂಚನ್, ಗೋಪಾಲ ಪೂಜಾರಿ, ದಿನೇಶ್ ಹೆಗ್ಡೆ ಮಳಹಳ್ಳಿ ಮಾರ್ಗದರ್ಶನ ನೀಡಿದರು.
ಪಕ್ಷ ಸಂಘಟನೆ ಬಗ್ಗೆ ಮಾತಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಮೂರು ವಿಧಾನ ಸಭಾ ಉಪಚುನಾವಣೆಗಳನ್ನು ಗೆಲ್ಲಿಸಿ ಜನ ನಮಗೆ ಶಕ್ತಿ ತುಂಬಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ವಾಗಿ ಅಳವಡಿಸಿ ಬಿಜೆಪಿಯ ಸುಳ್ಳು ಆರೋಪಗಳಿಗೆ ನಾವು ಜಗ್ಗ ಬೇಕಾಗಿಲ್ಲ ಎಂದರು.
ಕಳೆದ ಅವಧಿಯಲ್ಲಿ ನಮ್ಮನ್ನಗಲಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಕಾಂಗ್ರೆಸ್ ನಾಯಕ ಡಿ.ಆರ್.ರಾಜು ಇವರಿಗೆ ಕೆಪಿಸಿಸಿ ಉಪಾಧ್ಯಕ್ಷ ಎಂ.ವಿ.ಗಫೂರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಪಡುಬಿದ್ರಿ ನುಡಿನಮನ ಸಲ್ಲಿಸಿ ದರು. ಲಾರೆನ್ಸ್ ಡೇಸಾ ಮತ್ತು ಜೂಲಿಯಾನ ಡೇಸಾ ಒಳಗೊಂಡಂತೆ ಮತ್ತಿತರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಜ್ಯೋತಿ ಹೆಬ್ಬಾರ್ ಶೃದ್ಧಾಂಜಲಿ ಅರ್ಪಿಸಿದರು.
ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಕಿಶನ್ ಹೆಗ್ಡೆ ಕೊಳ್ಕಬೈಲ್, ರಮೇಶ್ ಕಾಂಚನ್, ದಿನಕರ ಹೇರೂರು, ಕೆ.ಅಣ್ಣಯ್ಯ ಶೇರಿಗಾರ್, ವರೋನಿಕಾ ಕರ್ನೆಲಿಯೋ, ಡಾ.ಸುನಿತಾ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಶುಭದಾ ರಾವ್, ನರಸಿಂಹಮೂರ್ತಿ, ದಿನೇಶ್ ಪುತ್ರನ್,ಹರೀಶ್ ಕಿಣಿ, ನಾಗೇಶ್ ಉದ್ಯಾವರ, ಗೀತಾವಾಗ್ಲೆ, ಕೀರ್ತಿ ಶೆಟ್ಟಿ, ಅರವಿಂದ ಪೂಜಾರಿ, ಹರಿಪ್ರಸಾದ್ ಶೆಟ್ಟಿ, ಸಂತೋಷ್ ಕುಲಾಲ್, ಜಯಕುಮಾರ್, ನವೀನ್‌ಚಂದ್ರ ಸುವರ್ಣ, ಬಿಪಿನ್‌ಚಂದ್ರಪಾಲ್, ಶೇಖ್‌ವಾಹಿದ್, ಇಸ್ಮಾಯಿಲ್ ಆತ್ರಾಡಿ, ಕೇಶವಕೋಟ್ಯಾನ್, ಶಬ್ಬಿರ್ ಅಹಮ್ಮದ್, ಸರಸು ಡಿ. ಬಂಗೇರ, ನವೀನ್ ಚಂದ್ರ ಶೆಟ್ಟಿ, ವೈ., ಸುಕುಮಾರ್ ಪಡುಬಿದ್ರೆ, ಭುಜಂಗ ಶೆಟ್ಟಿ, ಹಬೀಬ್ ಆಲಿ, ಮಮತ ಶೆಟ್ಟಿ, ದಿವಾಕರ್ ಕುಂದರ್, ಲೂಯಿಸ್ ಲೋಬೊ ಮೊದಲಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ. ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.