ಕೆಮ್ತೂರು ತುಳು ನಾಟಕ ಸ್ಪರ್ಧೆಗೆ ಅರ್ಜಿ ಆಹ್ವಾನ

Update: 2024-10-04 15:10 GMT

ಉಡುಪಿ, ಅ.4: ‘ಕೆಮ್ತೂರು ನಾಟಕ ಪ್ರಶಸ್ತಿ’ಗಾಗಿ ಕೆಮ್ತೂರು ದೊಡ್ಡಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯನ್ನು ಮುಂದಿನ ವರ್ಷದ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಸಲಾಗುತಿದ್ದು, ಇದಕ್ಕಾಗಿ ತುಳು ಹವ್ಯಾಸಿ ನಾಟಕ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತುಳು ರಂಗಭೂಮಿಯನ್ನು ಅನ್ಯಭಾಷಾ ರಂಗಭೂಮಿಗೆ ಸರಿಸಮಾನವಾಗಿ ಬೆಳೆಸಬೇಕೆಂಬ ಉದ್ದೇಶದಿಂದ ಪ್ರಾರಂಭ ಗೊಂಡ ಈ ಸ್ಪರ್ಧೆಯಲ್ಲಿ ದೇಶದ ಯಾವುದೇ ಭಾಗದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳು ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ಗರಿಷ್ಠ ಏಳು ನಾಟಕಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳೊಂದಿಗೆ ಕ್ರಮವಾಗಿ 20,000ರೂ., 15,000ರೂ., 10,000ರೂ. ನಗದು ಬಹುಮಾನವಿರುತ್ತದೆ. ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲೂ ಮೂರು ಬಹುಮಾನಗಳನ್ನು ನೀಡಲಾ ಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಕ್ರಿಯಾಶೀಲ ತುಳು ಹವ್ಯಾಸಿ ರಂಗ ತಂಡಗಳು ಮುದ್ರಿತ ಪ್ರವೇಶ ಪತ್ರ ಹಾಗೂ ನಿಯಮಾವಳಿಗಾಗಿ ಬಿ.ಪ್ರಭಾಕರ ಭಂಡಾರಿ, ‘ಪ್ರಕೃತಿ’ 5-94ಓ, 76ನೇ ಬಡಗುಬೆಟ್ಟು, ಬೈಲೂರು, ಉಡುಪಿ-576101 (ಮೊಬೈಲ್:9880825626) ಇವರನ್ನು ಸಂಪರ್ಕಿಸಬಹುದು. ಪ್ರವೇಶಪತ್ರಗಳನ್ನು ಸ್ವೀಕರಿಸಲು ನವೆಂಬರ್ 3 ಕೊನೆಯ ದಿನವಾಗಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News