ತಂದೆಯ ಆತ್ಮಹತ್ಯೆ ಪ್ರಕರಣ ಮುಚ್ಚಿಟ್ಟು ದಹನ ಮಾಡಿದ ಪುತ್ರನ ವಿರುದ್ಧ ಪ್ರಕರಣ ದಾಖಲು

Update: 2024-10-06 13:58 GMT

ಬ್ರಹ್ಮಾವರ, ಅ.6: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಂದೆಯ ಅಸ್ವಾಭಾವಿಕ ಮರಣ ಪ್ರಕರಣವನ್ನು ಪೊಲೀಸ್ ಠಾಣೆಗೆ ತಿಳಿಸದೆ ಮರೆಮಾಚಿ ಮೃತದೇಹ ಅಂತ್ಯಸಂಸ್ಕಾರ ಮಾಡಿದ ಘಟನೆಗೆ ಸಂಬಂಧಿಸಿ ಮೃತರ ಪುತ್ರನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ತಾಲೂಕಿನ 34ನೇ ಕುದಿ ಗ್ರಾಮದ ಬಿಯಾಳಿ ಹೊಸಗುಮ್ಮ ನಿವಾಸಿ ಸುಬ್ರಾಯ ನಾಯ್ಕ (66) ಎಂಬವರು ಮಾನಸಿಕ ಖಾಯಿಲೆಯಿಂದ ಸೆ.27ರಂದು ಅವರ ಗದ್ದೆಯ ಹತ್ತಿರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಅವರ ಹಿರಿಯ ಮಗನಾದ ಆರೋಪಿ ಸೀತಾರಾಮ ನಾಯ್ಕ (39) ಎಂಬಾತ ತನ್ನ ತಂದೆಯು ಸ್ವಾಭಾವಿಕವಾಗಿ ಮರಣ ಹೊಂದದೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದೂ ಕೂಡಾ ಈ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ಕಾನೂನಾತ್ಮಕವಾಗಿ ಮಾಹಿತಿ ನೀಡದೇ ಅಂದು ಸಂಜೆ 6 ಗಂಟೆಗೆ ತಂದೆ ಮೃತದೇಹವನ್ನು ದಹನ ಮಾಡಿದ್ದರು.

ಈ ಬಗ್ಗೆ ಮಾಹಿತಿಯಂತೆ ಅ.3ರಂದು ಪೊಲೀಸರು ಸ್ಥಳಕ್ಕೆ ಹೋಗಿ ವಿಚಾರಿಸಿ ನಡೆದ ಕೃತ್ಯವನ್ನು ಖಚಿತಪಡಿಸಿಕೊಂಡಿದ್ದು, ಅದರಂತೆ ಸೀತಾರಾಮ ನಾಯ್ಕ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ಯಾವುದೇ ಅಸ್ವಾಭಾವಿಕ ಮರಣ ಪ್ರಕರಣಗಳಾದಾಗ ಸಂಬಂಧಪಟ್ಟ ಇಲಾಖೆಗೆ ವಾರೀಸುದಾರರು ಅಥವಾ ಸಂಬಂಧಿ ತರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಸ್ವಾಭಾವಿಕ ಮರಣ ಪ್ರಕರಣ(ಯುಡಿಆರ್) ದಾಖಲಿ ಸುವುದು ಕಾನೂನು ಚೌಕಟ್ಟಿನಡಿರುವ ನಿಯಮವಾಗಿದೆ. ಯುಡಿಆರ್ ದಾಖಲಿಸದೆ ಮೃತದೇಹ ಅಂತ್ಯಕ್ರಿಯೆ ಮಾಡುವುದು ಕಾನೂನು ಪ್ರಕಾರ ಅಪರಾಧ ಕೃತ್ಯವಾಗಿದೆ’

- ಡಾ.ಅರುಣ ಕೆ., ಪೊಲೀಸ್ ಅಧೀಕ್ಷರರು, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News