ವಿದ್ಯಾರ್ಥಿಗಳಿಗೆ ವೀರಗಾಥಾ ಕಾರ್ಯಕ್ರಮ

Update: 2024-10-08 14:37 GMT

ಉಡುಪಿ: ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ದೇಶ ಭಕ್ತರ ಕುರಿತು ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಇಲಾಖೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾ ರೂಪದಲ್ಲಿ ವೀರಗಾಥಾ 4.0 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಕವನ ರಚನೆ, ಪ್ರಬಂಧ ರಚನೆ, ಚಿತ್ರಕಲೆ ಮತ್ತು ಬಹುಮಾಧ್ಯಮ ಪ್ರಸ್ತುತಿಯಲ್ಲಿ ಸ್ಪರ್ಧೆಗಳು ನಡೆಯಲಿವೆ. ೩ರಿಂದ ೧೨ನೇ ತರಗತಿಗಳ ಎಲ್ಲಾ ಮಾಧ್ಯಮ ಮತ್ತು ಪಠ್ಯಕ್ರಮಗಳ ವಿದ್ಯಾರ್ಥಿಗಳು ಸ್ಪರ್ಧಾ ವಿಷಯಗಳಿಗೆ ಸಂಬಂಧಿಸಿದ ತಮ್ಮ ಕೃತಿಯನ್ನು ತಯಾರಿಸಿ, ಅ.೧೫ ರ ಒಳಗೆ - https:// gallantryawards.gov.in/-ನಲ್ಲಿ ಸಲ್ಲಿಸಬಹುದು. ಸ್ಪರ್ಧೆಯ ವಿಜೇತರಿಗೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಬಹುಮಾನಗಳನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ - https://mygov.in/veer-gatha4- ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News