ಮೆಸ್ಕಾಂನಿಂದ ಪವರ್‌ಮೆನ್‌ಗೆ ಉಚಿತ ತರಬೇತಿ

Update: 2024-11-07 14:08 GMT

ಸಾಂದರ್ಭಿಕ ಚಿತ್ರ

ಉಡುಪಿ, ನ.7: ಕ.ವಿ.ಪ್ರ.ನಿ.ನಿಗಮದಿಂದ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಕಿರಿಯ ಪವರ್‌ಮೆನ್ ನೇಮಕಾತಿ ಸಂಬಂಧ ಸರಕಾರವು ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ಉಡುಪಿ ವಿಭಾಗದ ವತಿಯಿಂದ ಎಸೆಸೆಲ್ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಕಂಬ ಹತ್ತಿ ಇಳಿಯುವ ಉಚಿತ ತರಬೇತಿ ಯನ್ನು ನ. 14ರಿಂದ 16ರವರೆಗೆ ನಗರದ ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜು ಕ್ರೀಡಾಂಗಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಹಮ್ಮಿಕೊಳ್ಳಲಾಗಿದೆ.

ಅಭ್ಯರ್ಥಿಗಳು ಭಾವಚಿತ್ರ ಇರುವ ಗುರುತಿನ ಚೀಟಿ, ಎಸೆಸೆಲ್ಸಿ ಅಂಕಪಟ್ಟಿ ಯ ಪ್ರತಿ ಹಾಗೂ ಕಂಬ ಹತ್ತಿ ಇಳಿಯಲು ಸೂಕ್ತ ಉಡುಪಿನೊಂದಿಗೆ ಹಾಜರಾಗಬೇಕು. ನೇಮಕಾತಿಯು ಅಭ್ಯರ್ಥಿಯ ಅಂಕ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದ್ದು, ತರಬೇತಿ ಅವಧಿಯಲ್ಲಿ ಯಾವುದೇ ಉಚಿತ ಸೌಲಭ್ಯಗಳು ಇರುವುದಿಲ್ಲ. ಅಲ್ಲದೇ ತರಬೇತಿಯು ನೇಮಕಾತಿಯ ಭಾಗವಾಗಿರುವುದಿಲ್ಲ ಎಂದು ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News