ಕರ್ನಾಟಕ ಏಕೀಕರಣಕ್ಕೆ ಮಹನೀಯರ ಕೊಡುಗೆ ಮಾದರಿ: ಪ್ರೊ.ಭಾಸ್ಕರ್ ಶೆಟ್ಟಿ
ಬ್ರಹ್ಮಾವರ : ಒಮ್ಮನಸ್ಸಿನಿಂದ ಕರ್ತವ್ಯ ನಿರ್ವಹಿಸಿದರೆ ಯಾವ ಸಂದರ್ಭದಲ್ಲಿಯೂ ಯಶಸ್ಸನ್ನು ಸಾಧಿಸಬಹುದು. ಕರ್ನಾಟಕ ಏಕೀಕರಣಕ್ಕೆ ಸರ್ವ ತ್ಯಾಗ ಮಾಡಿದ ಮಹನೀಯರ ಕೊಡುಗೆ ನಮಗೆಲ್ಲರಿಗೂ ಮಾದರಿ ಎಂದು ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಸಲ್ವಾಡಿ ಹೇಳಿದ್ದಾರೆ.
ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊ ಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ರಾಜ್ಯೋ ತ್ಸವ ಸಂದೇಶವನ್ನು ನೀಡಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಮತಾ ಸ್ವಾಗತಿಸಿ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶೈಲಜಾ ರಾಷ್ಟ್ರೀಯ ಏಕತಾ ದಿನದ ಪ್ರಮಾಣ ವಚನ ಬೋಧಿಸಿದರು. ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕನ್ನಡ ಗೀತ ಗಾಯನ ನಡೆಸಿಕೊಟ್ಟರು.