ಯತ್ನಾಳ್ ಭಿನ್ನಮತ ವಿಚಾರ| ಸಣ್ಣಪುಟ್ಟ ಅಭಿಪ್ರಾಯ ಇದ್ದರೆ ನಾಯಕರು ಸರಿ ಮಾಡುತ್ತಾರೆ: ಸುನೀಲ್ ಕುಮಾರ್

Update: 2024-11-13 15:03 GMT

ಉಡುಪಿ, ನ.13: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವದಲ್ಲಿ ನಮಗೆ ಯಾವುದೇ ವಿವಾದ ಇಲ್ಲ. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಎಲ್ಲಾ ಸಂಘಟನೆ ಮಾಡುತ್ತಿದ್ದೇವೆ. ಸಣ್ಣಪುಟ್ಟ ಅಭಿಪ್ರಾಯ ಭೇದ ಇದ್ದರೆ ಸರಿ ಮಾಡಿ ಕೊಳ್ಳಬೇಕಾಗಿದೆ. ಇದು ಕೆಲವೊಮ್ಮೆ ಬಹಿರಂಗ ಆಗಿದೆ. ಅದನ್ನು ಸರಿ ಮಾಡುವ ಕೆಲಸ ನಮ್ಮ ನಾಯಕರು ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರು ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ನಿಶ್ಚಿತ. ನ.23ರ ನಂತರ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಆಂತರಿಕ ಬೇಗುದಿ ಹೊರಬರುತ್ತದೆ. ಹೊಸ ಮುಖ್ಯಮಂತ್ರಿಯೊಂದಿಗೆ ಬೆಳಗಾಂ ಅಧಿವೇಶನ ನಡೆಯು ತ್ತದೆ. ಕರ್ನಾಟಕದಲ್ಲಿರುವುದು ಮುಸಲ್ಮಾನರ ಸರಕಾರವೇ ಹೊರತು ಸರ್ವಜನರ ಸರಕಾರ ಅಲ್ಲ ಎಂದರು.

ಕಾಂಗ್ರೆಸ್ ನಗರ ನಕ್ಸಲರಿಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದೆ. ಈ ಸರಕಾರ ನಗರ ನಕ್ಸಲರನ್ನು ಒಟ್ಟು ಸೇರಿಸಿ ಸಭೆ ನಡೆಸುತ್ತದೆ. ಈಗ ಕಸ್ತೂರಿ ರಂಗನ್ ವಿಚಾರ ಇಟ್ಟುಕೊಂಡು ನಕ್ಸಲರು ಮತ್ತೊಮ್ಮೆ ಬೆಳಕಿಗೆ ಬಂದಿದ್ದಾರೆ. ಇದಕ್ಕೆ ಈ ಸರಕಾರದ ಧೋರಣೆಗಳೇ ಕಾರಣ ಹೊರತು ನಾಗರಿಕರಲ್ಲ. ನಗರ ನಕ್ಸಲರನ್ನು ಪೋಷಿಸುವ ಮೂಲಕ ಕಾಡಿನ ನಕ್ಸಲ ರನ್ನು ಪರೋಕ್ಷವಾಗಿ ಬೆಳೆಸುವ ಕಾರ್ಯ ಮಾಡಿದ್ದಾರೆ. ಮುಂದೆ ಇದು ಬಹಳ ದೊಡ್ಡ ಅಪಾಯವಾಗಲಿದೆ. ಪ್ರಜಾಪ್ರಭುತ್ವಕ್ಕೆ ನಕ್ಸಲ್ ಚಟುವಟಿಕೆ ಮಾರಕವಾಗಿದ್ದಾರೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News