ದೇಶದ ಅಭಿವೃದ್ಧಿಗೆ ನೆಹರು ಅವರ ಚಿಂತನೆ ಕಾರಣ: ನಾಗೇಶ್ ಕುಮಾರ್

Update: 2024-11-14 13:14 GMT

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ವತಿಯಿಂದ ಭಾರತದ ಪ್ರಥಮ ಪ್ರಧಾನಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿಯನ್ನು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಆಚರಿಸಲಾಯಿತು.

ಕಾಂಗ್ರೆಸ್ ಮುಖಂಡ ನಾಗೇಶ್ ಕುಮಾರ್ ಉದ್ಯಾವರ ಮಾತನಾಡಿ, ದೇಶ ಇಂದು ಅಭಿವೃದ್ಧಿ ಕಾಣಲು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಭಿವೃದ್ಧಿಯ ಚಿಂತನೆ ಕಾರಣ ಎಂದು ಹೇಳಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಮಾತನಾಡಿ, ನೆಹರು ಅವರ ಕೈಗಾರಿಕಾ ಕ್ರಾಂತಿ ಯಿಂದಾಗಿ ಇಂದು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ನೆಹರು ಅವರಿಗೆ ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದಾಗಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಮುಖಂಡರಾದ ನರಸಿಂಹಮೂರ್ತಿ, ಹರೀಶ್ ಕಿಣಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫೂದ್ದೀನ್ ಶೇಖ್, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ಅಣ್ಣಯ್ಯ ಶೇರಿಗಾರ್, ಭಾಸ್ಕರ್ ರಾವ್ ಕಿದಿಯೂರು, ಶೇಕ್ ವಾಹೀದ್, ರಿಯಾಝ್ ಬೈಂದೂರು, ಲಕ್ಷ್ಮೀಕಾಂತ್ ಬೆಸ್ಕೂರು, ಲಕ್ಷ್ಮಣ್ ಪೂಜಾರಿ, ಉದಯ್, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ವೆಂಕಟೇಶ್ ಪೆರಂಪಳ್ಳಿ, ಫಾರೂಕ್ ಚಂದ್ರ ನಗರ, ಅಬೂಬಕ್ಕರ್ ಉಡುಪಿ, ಶಂಶೂದ್ದೀನ್ ಮಜೂರು, ಗೋಪಾಲ್ ಬಂಗೇರ, ಮನ್ನಾ ಇಕ್ಬಾಲ್, ಸಾದಿಕ್ ಹೂಡೆ, ನಝೀರ್ ನೇಜಾರು, ಶ್ರೀಧರ್ ಶೇಟ್, ಅರ್ಚನಾ ದೇವಾಡಿಗ, ಪ್ರಶಾಂತ್ ಸುವರ್ಣ, ಸೂರ್ಯ ಸಾಲ್ಯಾನ್, ನಾಗೇಂದ್ರ ಪುತ್ರನ್, ವಿಲ್ಸನ್ ಸಿಕ್ವೇರಾ, ಸಜ್ಜನ್ ಶೆಟ್ಟಿ, ಸಂಜಯ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News