ಮಣಿಪಾಲ| ಸೂಪರ್ ಮೂನ್ ವೀಕ್ಷಣೆಗೆ ಅವಕಾಶ

Update: 2024-11-14 13:21 GMT

ಮಣಿಪಾಲ: ಮಣಿಪಾಲದ ರಾಯಲ್ ಎಂಬೆಸಿ ಕಟ್ಟಡದ 30ನೇ ಮಹಡಿಯಲ್ಲಿ ಎಂಐಟಿ ಉದ್ಯೋಗಿ ಆರ್.ಮನೋಹರ್‌ರವರ ಆವಿಷ್ಕೃತ ದೂರದರ್ಶಕದ ಮೂಲಕ ಸೂಪರ್ ಮೂನ್ ನೋಡುವ ಅವಕಾಶ ಕಲ್ಪಿಸಲಾಗಿದೆ.

ನ.15ರ ಸಂಜೆ 6ಗಂಟೆ ಆರಂಭಗೊಂಡು ರಾತ್ರಿ 8 ಗಂಟೆಯ ತನಕ ಕಟ್ಟಡದ ತುತ್ತ ತುದಿಯಲ್ಲಿ ಖಗೋಳ ಆಸಕ್ತರಿಗೆ ಸೂಪರ್ ಮೂನ್ ಜೊತೆಗೆ ಇತರ ಗ್ರಹಗಳನ್ನು ಕೂಡ ನೋಡಬಹುದು. ಇದರಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳಬೆಟ್ಟು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News