ಕುಂದಾಪುರ ರೊಜರಿ ಮಾತೆ ಇಗರ್ಜಿಯಲ್ಲಿ ತೆರಾಲಿ ಸಂಭ್ರಮ
ಕುಂದಾಪುರ: ಕುಂದಾಪುರ ರೊಜರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಮಂಗಳವಾರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ನಡೆಯಿತು.
ಈ ಪೂಜಾ ವಿಧಿಯನ್ನು ಬಸ್ರೂರು ಇಗರ್ಜಿಯ ಸಹಾಯಕ ಧರ್ಮಗುರು ವಂ.ಫಾ.ವಿಲ್ಸನ್ ಸಲ್ಡಾನ್ಹ ನಡೆಸಿ, ಸಂದೇಶ ನೀಡಿದರು. ಕುಂದಾಪುರ ಇಗರ್ಜಿಯ ಧರ್ಮಗುರು ಅ.ವಂ.ಪೌಲ್ ರೇಗೊ, ಹಿಂದಿನ ಧರ್ಮಗುರು ವಂ.ಸ್ಟ್ಯಾನಿ ತಾವ್ರೊ, ಹಿಂದಿನ ಸಹಾಯಕ ಧರ್ಮಗುರು ವಂ.ಅಶ್ವಿನ್ ಆರಾನ್ನಾ ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಕೆರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಕೆರೆಕಟ್ಟೆ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.
ಈ ಧಾರ್ಮಿಕ ಕಾರ್ಯಕ್ರಮದ ಪೋಷಕರಾದ ಜೂಲಿಯೆಟ್ ಪಾಯ್ಸ್, ಲವೀನಾ ಡಿಆಲ್ಮೇಡಾ, ಶರ್ಮಿಳಾ ಸುವಾರಿಸ್, ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿ ಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಚರ್ಚಿನ ಸದಸ್ಯರು ಉಪಸ್ಥಿತರಿದ್ದರು.