ಮಣಿಪಾಲದಲ್ಲಿ ಭವಿಷ್ಯ ನಿಧಿ ಜಾಗೃತಿ ಶಿಬಿರ ‘ನಿಧಿ ಆಪ್ಕೆ ನಿಕಟ್’

Update: 2024-11-28 15:27 GMT

ಉಡುಪಿ, ನ.28: ಹೊಸದಿಲ್ಲಿಯ ಇಪಿಎಫ್‌ಒ (ದಿ ಎಪ್ಲಾಂಯೀಸ್ ಫ್ರಾವಿಡೆಂಟ್ ಫಂಡ್ ಆರ್ಗನೈಝೇಶನ್)ನ ನವೆಂಬರ್ ತಿಂಗಳ ‘ನಿಧಿ ಆಪ್ಕೆ ನಿಕಟ್/ ಭವಿಷ್ಯ ನಿಧಿ ನಿಮ್ಮ ಹತ್ತಿರ’ ಜಾಗೃತಿ ಕಾರ್ಯಕ್ರಮ ಉಡುಪಿ ಕ್ಷೇತ್ರೀಯ ಕಾರ್ಯಾಲಯದ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತ ಸಂದೀಪ್ ಕುಮಾರ್ ನೇತೃತ್ವದಲ್ಲಿ ಬುಧವಾರ ಮಣಿಪಾಲದ ಎಂಐಟಿ ಕ್ಯಾಂಪಸ್‌ನ ಅಕಾಡೆಮಿ ಬ್ಲಾಕ್-2ರ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.

ನಿಧಿ ಆಪ್ಕೆ ನಿಕಟ್/ ಭವಿಷ್ಯ ನಿಧಿ ನಿಮ್ಮ ಹತ್ತಿರ ಕಾರ್ಯಕ್ರಮವು ಭವಿಷ್ಯ ನಿಧಿ ಸದಸ್ಯರ ಹಾಗೂ ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಹರಿಸಲು ಹಾಗೂ ಜಾಗೃತಿ ಮೂಡಿಸಲು ಭವಿಷ್ಯನಿಧಿ ಸಂಘಟನೆಯ ಹೊಸದಿಲ್ಲಿ ಪ್ರಧಾನ ಕಚೇರಿ ಪ್ರಾರಂಭಿಸಿರುವ ಜಿಲ್ಲಾ ಮಾಸಿಕ ಕಾರ್ಯಕ್ರಮವಾಗಿದೆ.

ಜಿಲ್ಲಾ ಮಟ್ಟದಲ್ಲಿ ಇಂಥ ಜಾಗೃತಿ ಶಿಬಿರವನ್ನು ಸಂಘಟಿಸುವ ಮೂಲಕ ಇಪಿಎಫ್‌ಓ ತನ್ನ ಕೋಟ್ಯಾತರ ಚಂದಾದಾರರ ಮನೆ ಬಾಗಿಲಿಗೆ ತನ್ನ ವಿವಿಧ ಸೇವೆಗಳು ತಲುಪಿಸುವುದನ್ನು ಖಚಿತ ಪಡಿಸಿಕೊಳ್ಳಲು ಭವಿಷ್ಯ ನಿಧಿ ಸಂಸ್ಥೆಯ ಪ್ರಯತ್ನ ವಾಗಿದೆ ಎಂದು ಸಂದೀಪ್‌ಕುಮಾರ್ ತಿಳಿಸಿದರು.

ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಉದ್ಯೋಗಿಗಳು ಹಾಗೂ ಉದ್ಯೋಗದಾತರನ್ನು ಒಗ್ಗೂಡಿಸುವ ಕಾರ್ಯಕ್ರಮ ಇದಾ ಗಿದ್ದು, ಇಪಿಎಫ್‌ಓ ಸೇವೆಗಳು ಎಲ್ಲರಿಗೂ ತಲುಪುದನ್ನು ಖಚಿತಪಡಿಸಿಕೊಳ್ಳಲು ಇದನ್ನು ನಡೆಸಲಾಗುತ್ತಿದೆ. ಅಲ್ಲದೇ ಅವರಿಗೆ ಸಂಘಟನೆಯ ವಿವಿಧ ಸೇವೆಗಳ ಅರಿವು ಮೂಡಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದೂ ಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂಐಟಿಯ ನಿರ್ದೇಶಕ ಕ್ಯಾ.ಡಾ.ಅನಿಲ್ ರಾಣಾ, ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಭಟ್ ಹಾಗೂ ಎಂಐಟಿ ಇಪಿಎಫ್ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು. ಇಎಸ್‌ಐ ನಿಗಮದ ಶಾಖಾ ಮ್ಯಾನೇಜರ್ ಪ್ರಿಯಾಗಿ ಮಂಜುನಾಥ್ ಅಂಬಿಗ್ ಅವರು ಶಿಬಿರದಲ್ಲಿ ಭಾಗವಹಿಸಿ ಇಎಸ್‌ಐಸಿಯ ಅಗತ್ಯತೆಯ ಕುರಿತಂತೆ ಉದ್ಯೋಗಿಗಳಿಗೆ ಮಾಹಿತಿ ನೀಡಿದರು.

ಇಪಿಎಫ್‌ಓ ಪರವಾಗಿ ಅನುಷ್ಠಾನ ಅಧಿಕಾರಿ ಸುನಿಲ್ ಕುಮಾರ್, ಹಣಕಾಸು ಅಧಿಕಾರಿ ರಾಜೀವ್ ಕುಮಾರ್ ಝಾ, ಎನ್.ಶ್ರವಣ್, ಡಿಪಿಎ ಶ್ರೀಕುಮಾರ್, ಎಸ್‌ಎಸ್‌ಎ ಗೌರಿಶಂಕರ್ ಸೈನಿ ಉಪಸ್ಥಿತರಿದ್ದು, ಉದ್ಯೋಗಿಗಳು ಹಾಗೂ ಉದ್ಯೋಗದಾತರಿಗೆ ಅವರ ಹಕ್ಕುಗಳು ಹಾಗೂ ಜವಾಬ್ದಾರಿಯ ಕುರಿತಂತೆ, ಅಲ್ಲದೇ ವಿವಿಧ ಯೋಜನೆಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡರು.

ಶಿಬಿರದಲ್ಲಿ ಫ್ರಾವಿಡೆಂಟ್ ಫಂಡ್ (ಪಿಎಫ್), ಪೆನ್ಶನ್ ಯೋಜನೆ (ಇಪಿಎಸ್), ಇಎಸ್‌ಐಸಿ ಸೇರಿದಂತೆ ಇಪಿಎಫ್‌ಓ ಅಡಿ ಯಲ್ಲಿ ಬರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಅಧಿಕಾರಿಗಳು ಅರಿವು ಮೂಡಿಸಿದರು. ಸಭೆಯಲ್ಲಿ ಸೇವಾ ನಿವೃತ್ತರಿಗೆ ಪ್ರಯಾಸ್ ಸ್ಕೀಮ್‌ನಡಿ ಪಿಪಿಓವನ್ನು ವಿತರಿಸಲಾಯಿತು.

ಎಲ್ಲಾ ಪಿಎಫ್ ಚಂದಾದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗದಾತರು, ಟ್ರೇಡ್ ಯೂನಿಯನ್ ಮುಖಂಡರು, ಸದಸ್ಯರಿಗೆ ಅಧಿಕಾರಿಗಳು ವಿವಿಧ ವಿಷಯಗಳ ಕುರಿತು ಮಾಹಿತಿಗಳನ್ನು ನೀಡಿದರು. ಸಂದೀಪ್‌ಕುಮಾರ್ ಹಾಗೂ ಇತರ ಅಧಿಕಾರಿಗಳು ಎಂಪ್ಲಾಯೀ ಪೆನ್ಷನ್ ಸ್ಕೀಮ್‌ನ ವಿವಿಧ ವಿಷಯಗಳನ್ನು ಮನದಟ್ಟು ಮಾಡಿದರಲ್ಲದೇ, ಅವರ ಸಂಶಯಗಳಿಗೆ ಉತ್ತರಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News