ಮನಮೋಹನ್ ಸಿಂಗ್ ದೇಶ ಕಂಡ ಅಪರೂಪದ ರಾಜಕೀಯ ಮುತ್ಸದ್ದಿ: ವಿನಯ ಕುಮಾರ್ ಸೊರಕೆ

Update: 2024-12-29 14:18 GMT

ಉಡುಪಿ, ಡಿ.29: ಡಾ.ಮನಮೋಹನ್ ಸಿಂಗ್ ಅವರ ಪ್ರಾಮಾಣಿಕತೆ ಮತ್ತು ಆರ್ಥಿಕ ಚಿಂತನೆ ಗಳು ಸದಾ ಭಾರತದ ರಾಜಕೀಯ ಹಾಗೂ ಆರ್ಥಿಕ ಇತಿಹಾಸದಲ್ಲಿ ಚಿರಾಯುವಾಗಿ ನೆನಪಿಯಲ್ಲಿ ಉಳಿಯುತ್ತದೆ ಎಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಕಾಂಗ್ರೆಸ್ ಭವನದಲ್ಲಿ ರವಿವಾರ ಹಮ್ಮಿಕೊಂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಡತನದಿಂದ ಬಂದು ದೇಶದ ಅತ್ಯುನ್ನತ ಹುದ್ದೆ ಹಿಡಿದವರು ಡಾ.ಮನಮೋಹನ್ ಸಿಂಗ್. ದೇಶದ ಬಡತನ ನಿವಾರಣೆಗೆ ಸಂಕಲ್ಪ ತೊಟ್ಟು ಬಡ ಕುಟುಂಬಗಳನ್ನು ಆರ್ಥಿಕವಾಗಿ ಸಧೃಡ ಗೊಳಿಸುವ ಯೋಜನೆಗಳನ್ನು ಜಾರಿಗೊಳಿಸಿದರು. ನರಸಿಂಹ ರಾವ್ ಸರಕಾರದಲ್ಲಿ ಕೇಂದ್ರ ವಿತ್ತ ಸಚಿವರಾಗಿ ಹಲವು ಸುಧಾರಣೆಗಳ ಕ್ರಮ ಕೈಗೊಂಡಿದ್ದರು ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಪೂರ್ ಮಾತನಾಡಿ, 2004ರಿಂದ 2014ರ ತನಕ ಪ್ರಧಾನಿಗಳಾಗಿ ಅತ್ಯಂತ ಪ್ರಾಮಾಣಿ ಕತೆಯಿಂದ ಆರ್ಥಿಕ ಸುಧಾರಣೆ ಮತ್ತು ಅಭಿವೃದ್ಧಿಯ ಪಥದಲ್ಲಿ ರಾಷ್ಟ್ರವನ್ನು ಮುನ್ನಡೆಸಿದ್ದರು ಎಂದರು.

ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಕಡಿಮೆ ಮಾತು ಹಾಗೂ ಪ್ರಚಾರದಿಂದ ದೂರ ಉಳಿದ ಪ್ರಾಮಾಣಿಕ ರಾಜಕೀಯ ನಡೆಯಿಂದ ಸಮ್ಮಿಶ್ರ ಸರಕಾರವನ್ನು ಅತ್ಯಂತ ಸುಗಮ ರೀತಿಯಲ್ಲಿ ಮುನ್ನಡೆಸಲು ಇವರಿಗೆ ಸಾಧ್ಯವಾಯಿತು. ಪ್ರಚಾರದಿಂದ ದೂರ ಉಳಿದ ದೇಶ ಕಂಡ ಸರಳ ಸಜ್ಜನಕೆಯ ಅರ್ಥಶಾಸ್ತ್ರಜ್ಞ ಇವರು. ತಮ್ಮ ಶೈಕ್ಷಣಿಕ ಅರ್ಹತೆಯ ಮೂಲಕವೇ ಪ್ರಧಾನಿ ಹುದ್ದೆ ಪಡೆದ ಕೀರ್ತಿ ಮನಮೋಹನ್ ಸಿಂಗ್‌ಗೆ ಸಲ್ಲುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪಕ್ಷದ ಮುಖಂಡರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಪ್ರಖ್ಯಾತ್ ಶೆಟ್ಟಿ, ವಿಕಾಸ ಹೆಗ್ಡೆ, ಫಾ.ಮಿಲಿಯಂ ಮಾರ್ಟಿಸ್, ನೀರೇ ಕೃಷ್ಣ ಶೆಟ್ಟಿ, ಹರೀಶ್ ಕಿಣಿ, ಬಿ.ನರಸಿಂಹಮೂರ್ತಿ, ಗೀತಾ ವಾಗ್ಳೆ, ರಮೇಶ್ ಕಾಂಚನ್, ಮಹಾಬಲ ಕುಂದರ್, ಹರೀಶ್ ಶೆಟ್ಟಿ ಪಂಗಾಳ, ಶಶಿಧರ್ ಶೆಟ್ಟಿ ಎಲ್ಲೂರು, ಸರ್ಫುದ್ದೀನ್ ಶೇಖ್, ಕಿರಣ್ ಹೆಗ್ಡೆ, ಶಬ್ಬಿರ್ ಅಹ್ಮದ್, ಜಯ ಕುಮಾರ್, ಕಿಶೋರ್ ಕುಮಾರ್ ಎರ್ಮಾಳ್, ಡಾ.ಸುನಿತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ, ಹಬೀಬ್ ಅಲಿ, ಸಂಧ್ಯಾ ತಿಲಕ್, ಮಮತಾ ಶೆಟ್ಟಿ, ಉಪೇಂದ್ರ ಮೆಂಡನ್, ಜಯರಾಮ್ ಪರ್ಕಳ, ಉದ್ಯಾವರ ನಾಗೇಶ್ ಕುಮಾರ್, ಲೂಯಿಸ್ ಲೋಬೋ, ಇಸ್ಮಾಯಿಲ್ ಆತ್ರಾಡಿ, ಯತೀಶ್ ಕರ್ಕೆರ, ಶ್ರೀಧರ್ಮ ಸಂಜಯ ಆಚಾರ್ಯ, ಗಣೇಶ್ ನೆರ್ಗಿ, ಗೋಪಾಲ್ ಬಂಗೇರ, ನಾಗೇಂದ್ರ ಪುತ್ರನ್, ಲಕ್ಷ್ಮೀಶ್ ಶೆಟ್ಟಿ, ಧನಂಜಯ ಕುಮಾರ್, ಸಾಯಿ ರಾಜ್, ಝೆವಿಯರ್, ಸುರೇಶ್ ಶೆಟ್ಟಿ ಬನ್ನಂಜೆ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News