ಕಾರ್ಕಳ| ಡಿಜಿಟಲ್ ಅರೆಸ್ಟ್: 8.93ಲಕ್ಷ ರೂ. ಆನ್‌ಲೈನ್ ವಂಚನೆ

Update: 2024-12-31 14:29 GMT

ಕಾರ್ಕಳ, ಡಿ.31: ಡಿಜಿಟಲ್ ಅರೆಸ್ಟ್ ಆಗಿದೆಂದು ಬೆದರಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ಕೋರ್ಟ ರಸ್ತೆಯ ಶಿವಾನಂದ ವಿ.ಪದ್ಮಶಾಲಿ(57) ಎಂಬವರಿಗೆ ಅಪರಿಚಿತ ವ್ಯಕ್ತಿ ಮುಂಬೈ ಕ್ರೈಂ ಬ್ರಾಂಚ್‌ನಿಂದ ಕರೆ ಮಾಡಿರುವುದಾಗಿ ಹೇಳಿ, ನಿಮ್ಮ ಮೇಲೆ ಕೇಸು ದಾಖಲಾಗಿದೆ, 30,00,000ರೂ. ಹಣ ಬೇರೆ ಬೇರೆ ಅಕೌಂಟ್‌ನಲ್ಲಿ ಮೋಸ ಮಾಡಿದ್ದೀರಿ, ನಿಮ್ಮನ್ನು ಡಿಜಿಟಲ್ ಆರೆಸ್ಟ ಮಾಡುವುದಾಗಿ ಬೆದರಿಕೆ ಹಾಕಿ ನಿಮ್ಮ ಅಕೌಂಟ್ ವೆರಿಪೈ ಆಗಬೇಕು ಮತ್ತು ಕೂಡಲೇ ಹಣ ವರ್ಗಾವಣೆ ಮಾಡಬೇಕು ಎಂದು ತಿಳಿಸಿದರು.

ಇದರಿಂದ ಭಯಭೀತರಾದ ಶಿವಾನಂದ ಡಿ.13ರಿಂದ ಡಿ.17ರವರೆಗೆ ವಿವಿಧ ಹಂತಗಳಲ್ಲಿ ಪವನ್ ಕುಮಾರ್ ಗುಜಾರ್ ಖಾತೆಗೆ ಒಟ್ಟು 8,93,000 ರೂ. ಹಣವನ್ನು ಆನಲೈನ್ ಮುಖಾಂತರ ಹಾಕಿ ಮೋಸ ಹೋಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News