ಹುತಾತ್ಮ ಯೋಧ ಅನೂಪ್ ಪೂಜಾರಿ ಕುಟುಂಬಕ್ಕೆ ನೆರವು
ಕುಂದಾಪುರ, ಜ.3: ಜಮ್ಮು ಕಾಶ್ಮೀರದಲ್ಲಿ ಅಪಘಾತದಿಂದ ಹುತಾತ್ಮರಾದ ಬೀಜಾಡಿಯ ಯೋಧ ಅನೂಪ್ ಪೂಜಾರಿ ಅವರ ನಿವಾಸಕ್ಕೆ ಗುರುವಾರ ಡಾ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಅವರು ಮೃತರ ಪತ್ನಿ ಮಂಜುಶ್ರೀ ಅವರಿಗೆ ಒಂದು ಲಕ್ಷ ರೂ. ಹಾಗೂ ತಾಯಿ ಚಂದು ಪೂಜಾರಿ ಅವರಿಗೆ 50 ಸಾವಿರ ರೂ. ಮೊತ್ತದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ದಯಾನಂದ್, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಸಮಾಜ ಸೇವಕ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ್ ಕುಂದರ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್, ಮಾಜಿ ಅಧ್ಯಕ್ಷರಾದ ಸತೀಶ್ ಎಂ.ನಾಯ್ಕ್, ವಿನಯ ಕರ್ಕೇರ, ಉಪಾಧ್ಯಕ್ಷ ರವೀಶ್ ಎಸ್.ಕೊರವಡಿ, ಕೋಟೇಶ್ವರ ಘಟಕದ ಅಧ್ಯಕ್ಷ ನಾಗರಾಜ್ ಬೀಜಾಡಿ, ಮಾಜಿ ಅಧ್ಯಕ್ಷರಾದ ಜಗದೀಶ್ ಮೊಗವೀರ ಮಾರ್ಕೋಡು, ಸುರೇಶ್ ಚಾತ್ರಬೆಟ್ಟು, ಬೀಜಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಸುಮತಿ ನಾಗರಾಜ್, ಹಿರಿಯರಾದ ಹೆರಿಯಣ್ಣ ಚಾತ್ರಬೆಟ್ಟು, ಶೇಖರ ಚಾತ್ರಬೆಟ್ಟು, ಬಾಬಣ್ಣ ಪೂಜಾರಿ ಉಪಸ್ಥಿತರಿದ್ದರು.