ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ವಾರ್ಷಿಕ ಮಹಾಸಭೆ
ಉಡುಪಿ: ಕುವೈತ್ -ಮಣಿಪುರ ಮುಸ್ಲಿಂ ಅಸೋಸಿಯೇಶನ್ ಇದರ 21ನೇ ವರ್ಷದ ಹಾಗೂ 2024ರ ವಾರ್ಷಿಕ ಮಹಾಸಭೆ ಸಂಘದ ಸ್ಥಾಪಕ ಗೌರವಾಧ್ಯಕ್ಷ ಸೈಯದ್ ಅಹಮದ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಲ್ಮೀಯ ಸುನ್ನೀ ಸೆಂಟರ್ನಲ್ಲಿ ನಡೆಯಿತು.
ಸಭೆಯನ್ನು ಅಲ್ ಮದೀನ ಕುವೈತ್ ಕಮಿಟಿಯ ಅಧ್ಯಕ್ಷ ಶಾಹುಲ್ ಹಮೀದ್ ಸಅದಿ ಉದ್ಘಾಟಿಸಿದರು. 2024ರ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಇ.ಏ. ವಾಚಿಸಿದರು. ಲೆಕ್ಕಪತ್ರವನ್ನು ಖಜಾಂಜಿ ಜಮಾಲ್ ಮಣಿಪುರ ಮಂಡಿಸಿದರು. ಸಂಘದ ಅಧ್ಯಕ್ಷ ಝುಬೈರ್ ಶಾಬಾನ್ ಮಾತನಾಡಿದರು.
2025ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು ಗೌರವಾಧ್ಯಕ್ಷರಾಗಿ ಸೈಯದ್ ಅಹಮದ್, ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ, ಕೋಶಾಧಿಕಾರಿಯಾಗಿ ಜಮಾಲ್ ಮಣಿಪುರ, ಹಾಗೂ 17 ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಶಾಫಿ ಕೃಷ್ಣಾಪುರ ಕಿರಾಅತ್ ಪಠಿಸಿದರು. ಇಮ್ತಿಯಾಜ್ ಸೂರಿಂಜೆ ಸ್ವಾಗತಿಸಿದರು. ಹೈದರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಸುಲೈಮಾನ್ ಉಚ್ಚಿಲ ವಂದಿಸಿದರು.