ಅಬಕಾಸ್ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಉಡುಪಿ: ಸ್ಮಾರ್ಟ್ ಕಿಡ್ ಅಬಾಕಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಹಾರಾಷ್ಟ್ರದ ಪುಣೆಯಲ್ಲಿ ಇತ್ತೀಚೆಗೆ ನಡೆದ 14ನೇ ರಾಷ್ಟ್ರೀಯ ಮತ್ತು 7ನೇ ಅಂತರಾಷ್ಟ್ರೀಯ ಅಬಾಕಸ್ ಮತ್ತು ವೇದಿಕ್ ಮ್ಯಾತ್ಸ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಉಡುಪಿ ಸಂತೆಕಟ್ಟೆಯ ಸ್ಮಾರ್ಟ್ ಕಿಡ್ ಅಬಾಕಸ್ನ ವಿದ್ಯಾರ್ಥಿಗಳಾದ ಪೋದರ್ ಇಂಟರ್ ನ್ಯಾಶನಲ್ ಸ್ಕೂಲ್ನ ಹರ್ಷವರ್ಧನ್ ಬಿ.ವೈ., ಧನುಶ್ ಅಂದರ್ಶ್, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಆಯುಷ್ ಪಿ.ಶೆಟ್ಟಿ, ವಂಡ್ಸೆ ವಿಜಯ ಮಕ್ಕಳ ಕೂಟದ ಶಿಶೀರ್ ಬಂಗೇರ, ರಿತಿನ್ ಪಿ.ಶೆಟ್ಟಿ, ಗುಂಡಿಬೈಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಯದುಕೃಷ್ಣ ಎಂ., ತೆಂಕನಿಡಿಯೂರು ರಾಧಾ ವಿದ್ಯಾನಿಕೇತನದ ಭಾಗ್ಯಲಕ್ಮಿ, ಪೆರಂಪಳ್ಳಿ ತ್ರಿನಿಟಿ ಸೆಂಟ್ರಲ್ ಸ್ಕೂಲ್ನ ಮನಸ್ವಿ ಸುವರ್ಣ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕಿ ಮಾಲತಿ ಶಿವರಾಮ್ ಶೆಟ್ಟಿ ಇವರಿಗೆ ಸ್ಮಾರ್ಟ್ ಕಿಡ್ ಅಬಾಕಸ್ನ ಸಂಜಯ್ ಕಲಂಕರ್ ಬೆಸ್ಟ್ ಫ್ರ್ಯಾಂಚಯಿಸಿ ಪ್ರಶಸ್ತಿ ನೀಡಿ ಗೌರವಿಸಿದರು.