ಯಕ್ಷಗಾನ ಕಲಾರಂಗದ 61ನೇ ಮನೆ ಉದ್ಘಾಟನೆ

Update: 2025-01-05 14:40 GMT

ಕಾರ್ಕಳ: ಯಕ್ಷಗಾನ ಕಲಾರಂಗವು ಕಾರ್ಕಳದ ಪರಪ್ಪಾಡಿಯಲ್ಲಿ ವಿದ್ಯಾಪೋಷಕ್‌ನ ಪ್ರಥಮ ಪಿ.ಯು. ವಿದ್ಯಾರ್ಥಿ ಪ್ರಶಾಂತನಿಗೆ ನಿರ್ಮಿಸಿದ ಮನೆಯ ಪ್ರಾಯೋಜಕತ್ವ ವಹಿಸಿ ತನ್ನ ಪತ್ನಿಯ ನೆನಪಿಗೆ ಸಮರ್ಪಿಸಿದ ಸುರತ್ಕಲ್‌ನ ಕುಮಾರಚಂದ್ರ ರಾವ್ ‘ಜಯಲಕ್ಷ್ಮಿ’ ಮನೆಯನ್ನು ಶನಿವಾರ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಲಾರಂಗದ ಕಾರ್ಯಕರ್ತರ ತಂಡ ಮೌನವಾಗಿ ಮಾಡುತ್ತಿರುವ ಕೆಲಸಗಳು ಸಾಮಾಜಿಕ ಸಂಘಟನೆಗಳಿಗೆ ಮಾದರಿಯಾಗಿವೆ ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ಕುಮಾರಚಂದ್ರರ ಸಹೋದರ ಪಿ.ಸಿ. ವಾಸುದೇವ ರಾವ್ ಅವರ ಪುತ್ರಿಯರಾದ ಸುಮಂಗಲಾ ಆರ್.ರಾವ್, ಸುಭದ್ರಾ ರಾವ್ ಮತ್ತು ರಘುಪತಿ ರಾವ್, ರವಿರಾಜ್ ರಾವ್ ಮುಖ್ಯ ಅತಿಥಿಗಳಾಗಿದ್ದರು.

ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಎ.ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯಾಯ, ವಿದ್ಯಾಪ್ರಸಾದ್, ದಿನೇಶ ಪಿ.ಪೂಜಾರಿ, ಅಶೋಕ ಎಂ., ಕೆ.ಅಜಿತ್ ಕುಮಾರ್, ಗಣೇಶ ಬ್ರಹ್ಮಾವರ, ದಾನಿಗಳಾದ ಚಂದ್ರಕಲಾ ಎಂ. ರಾವ್, ವೈಜಯಂತಿ ಕಾಮತ್, ಗ್ರಾಪಂ ಅಧ್ಯಕ್ಷ ಅಶೋಕ ಪೂಜಾರಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News