ಮಣಿಪಾಲ: ಫಲಾನುಭವಿಗಳಿಗೆ ರೇಡಿಯೊ ವಿತರಣಾ ಅಭಿಯಾನ

Update: 2025-01-05 13:39 GMT

ಮಣಿಪಾಲ: ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ರೇಡಿಯೊ ಕೇಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಅರ್ಹ ಫಲಾನುಭವಿಗಳಿಗೆ ರೇಡಿಯೊ ವಿತರಣಾ ಅಭಿಯಾನಕ್ಕೆ ಶನಿವಾರ ಮಣಿಪಾಲ್ ಎಂ.ಐ.ಸಿ ಕ್ಯಾಂಪಸ್‌ನಲ್ಲಿ ಚಾಲನೆ ನೀಡಲಾಯಿತು.

ಫಲಾನುಭವಿಗಳಾಗಿ ಮೂಡು ಅಲೆವೂರಿನ ಬೇಬಿ ಲೀಲಾ ಮತ್ತು ದೃಷ್ಟಿ ಸಮಸ್ಯೆ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ಪಾವನ ರೇಡಿಯೊ ಸ್ವೀಕರಿಸಿದರು. ಮೂಲತಃ ಉಡುಪಿಯ ಮಟ್ಟು ಗ್ರಾಮದವರಾದ ಮಾಹೆ ಎಂ.ಐ.ಟಿ ಹಳೆ ವಿದ್ಯಾರ್ಥಿ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಇಂಜಿನಿಯರ್ ಪ್ರಶಾಂತ ಕುಮಾರ್ ಮಟ್ಟು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್‌ನ ನಿರ್ದೇಶಕ ಡಾ.ಪದ್ಮಾರಾಣಿ, ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು, ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ಮೋಹನ್ ಹಂದಾಡಿ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮತ್ತು ರೇಡಿಯೊ ಮಣಿಪಾಲ್‌ನಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ರಶ್ಮಿ ಅಮ್ಮೆಂಬಳ ಉಪಸ್ಥಿತರಿದ್ದರು. ಎಂಐಸಿ ಸಿಬ್ಬಂದಿ ಸದಾನಂದ್ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News