ದಲಿತರ ಪಾಲಿನ ನಂದಾದೀಪ ಸಾವಿತ್ರಿ ಬಾಯಿಫುಲೆ: ಜಯನ್ ಮಲ್ಪೆ

Update: 2025-01-03 12:41 GMT

ಮಲ್ಪೆ, ಜ.3: ಭಾರತದ ದಲಿತ ಹೆಣ್ಣುಮಕ್ಕಳ ಭವಿಷ್ಯದಲ್ಲಿ ಶಿಕ್ಷಣದ ಮೂಲಕ ಬೆಳಕಿಗೆ ತಂದು ಇತಿಹಾಸ ಸೃಷ್ಟಿಸಿದ ಅಕ್ಷರ ಮಾತೆ ಸಾವಿತ್ರಿ ಬಾಯಿಫುಲೆ ಶೋಷಿತ ಸಮುದಾಯಕ್ಕೆ ನಂದಾದೀಪವಾಗಿದ್ದಾರೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿ ಸಲಾದ ಸಾವಿತ್ರಿ ಬಾಯಿ ಫುಲೆಯವರ 134ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.

ಮಾನವತೆ ಅಂತ:ಕರುಣೆಯನ್ನು, ಪ್ರಖರ ವಿಚಾರಧಾರೆಗಳಿಂದ ವಿವರಿಸುತ್ತ ಅಡ್ಡಿ ಆತಂಕಗಳು, ಜೀವ ಬೆದರಿಕೆಯಂತಹ ಪ್ರಸಂಗಗಳನ್ನೂ ಎದುರಿಸಿ, ಸತ್ಯದ ಅರಿವಿನೊಂದಿಗೆ, ಮಾನವತೆಯ ಜಾಗ್ರತಿಗಾಗಿ ಶ್ರಮಿಸುವ ಮೂಲಕ ಇತಿಹಾಸ ನಿರ್ಮಿಸಿದ ಅಕ್ಷರದ ಅವ್ವ ಎಂದರು.

ಸಾವಿತ್ರಿ ಬಾಯಿ ಪುಲೆಯವರ ಬಗ್ಗೆ ಮಹಿಳೆಯರಲ್ಲಿ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ಸಮಾಜ ಒಪ್ಪಿಕೊಳ್ಳಲೂ ಆಗದ ಕಠಿಣ ಪರಿಸ್ಥಿತಿಯಲ್ಲಿ ಅಪಾರ ಕಷ್ಟಗಳ್ಳನ್ನು ಎದುರಿಸಿ ದಲಿತ, ಶೂದ್ರರ ಮಹಿಳೆಯರಿಗೆ ಅಕ್ಷರ ಕಲಿಸಲು ಇವರು ತಮ್ಮ ಜೀವ ಸವೆಸಿ ಜ್ಷಾನದಾತೆ ಎಂದು ಅವರು ತಿಳಿಸಿದರು.

ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಂಜೀವ ಬಳ್ಕೂರು ಮಾತನಾಡಿ, ಅಂದಿನ ಕಾಲದಲ್ಲಿ ದಲಿತ ಹೆಣ್ಣುಮಕ್ಕಳಿಗೆ ಶಿಕ್ಷಣ ವಂಚಿಸಿದ ಸವರ್ಣೀಯರ ವಿರುದ್ಧ ಸೆಟೆದು ನಿಂತು ಶಿಕ್ಷಣ ನೀಡುವಾಗ ಅವರು ಎದುರಿಸಿದ ನಿಂದನೆ, ನೋವು, ಅವಮಾನ, ಅವರ ಮೇಲೆ ಕಲ್ಲು, ಮಣ್ಣು, ಸೆಗಣಿ ಎಸೆದಾಗ ಎಲ್ಲಿಯೂ ಜಗ್ಗದೆ ತನ್ನ ಅಚಲವಾದ ಶ್ರದ್ದೆ ಮತ್ತು ಇಚ್ಛಾಶಕ್ತಿ ಯಿಂದ ಪಾಠ ಕಲ್ಲಿಸಿದ ಸಾವಿತ್ರಿ ಬಾಯಿ ಪುಲೆ ಈ ದೇಶದ ಅನೇಕ ಅನಿಷ್ಠ ಪದ್ಧತಿಯ ವಿರುದ್ದ ಹೋರಾಡಿದವರು ಎಂದರು.

ಹಿರಿಯ ದಲಿತ ಮುಖಂಡ ದಯಾಕರ್ ಮಲ್ಪೆಮಾತನಾಡಿ, ಇಂದು ಕಾಲಮಾನ ಬದಲಾಗಿದೆ. ಎಷ್ಟೇಲ್ಲ ಅನುಕೂಲ ತೆಗಳಿದ್ದರೂ ನಾವು ಎಷ್ಟು ಜನ ಅಭಾಗ್ಯರಿಗಾಗಿ ವಿದ್ಯೆ ನೀಡಲು ಕಾಳಜಿ ವಹಿಸುತ್ತಿದ್ದೇವೆ ಎನ್ನುವುದು ಮುಖ್ಯ. ಈ ಇಚ್ಚಾ ಶಕ್ತಿಯನ್ನು ಸಾವಿತ್ರಿ ಬಾಯಿ ಪುಲೆಯಂಥವರ ಜೀವನ ಮಾರ್ಗ ನಮಗೆ ಆದರ್ಶವಾಗಬೇಕು ಎಂದು ಹೇಳಿದರು.

ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಸಾವಿತ್ರಿ ಬಾಯಿ ತಾವು ಕಲಿತ ವಿದ್ಯೆಯನ್ನು ಸಮಾಜ ಪರಿರ್ವತನೆಗಾಗಿ ದಲಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ್ದನ್ನು ದಲಿತರು ಯಾವತ್ತೂ ಮರೆಯಬಾರದು. ರೋಗಿಗಳಿಗೂ ಔಷದೋಪಚಾರ ಮಾಡುವಲ್ಲಿ ಸಾವಿತ್ರಿ ಬಾಯಿ ಹಗಲಿರುಳು ಶ್ರಮಿಸಿದ ಇತಿಹಾಸವಿದೆ ಎಂದರು.

ಅಂಬೇಡ್ಕರ್ ಯುವಸೇನೆಯ ಮುಖಂಡರಾರ ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಸಾಧು ಚಿಪ್ಟಾಡಿ, ಸತೀಶ್ ಕಪ್ಪೆಟ್ಟು, ಗುಣವಂತ ತೊಟ್ಟಂ, ಸುಶೀಲ್ ಕೊಡವೂರು, ಬಿ.ಎನ್.ಪ್ರಶಾಂತ್, ವಿನಯ ಕೊಡಂಕೂರು, ಅರುಣ್ ಸಾಲ್ಯಾನ್, ಸುಕೇಶ್ ಪುತ್ತೂರು, ವಿನಯ ಬಲರಾಮನಗರ, ಶಖಿ ಕಪ್ಪೆಟ್ಟು, ನವೀನ್ ಬನ್ನಂಜೆ, ಶಶಿಕಾಂತ್ ನೇಜಾರು, ರವಿ,ಶಂಕರ್ ಕೆಳಾರ್ಕಳಬೆಟ್ಟು, ಈಶ್ವರ್ ಲಂಬಾಣಿ, ಸೋಮನಾಥ ಚವಾಣ್, ಸುಧೀರ್ ಲಂಬಾಣಿ, ಪ್ರಶಾಂತ್ ನೇಜಾರು ಮೊದಲಾ ದವರು ಉಪಸ್ಥಿತರಿದ್ದರು. ಹರೀಶ್ ಸಾಲ್ಯಾನ್ ಸ್ವಾಗತಿಸಿದರು. ದೀಪಕ್ ಕೊಡವೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News