ಮಾಜಿ ಮೇಯರ್ ಸುನಂದಾ ಬೋಳೂರುಗೆ ಹೊಸ ಬೆಳಕು ಪ್ರಶಸ್ತಿ ಪ್ರದಾನ
ಮಂಗಳೂರು: ಸ್ತ್ರೀ ಜಾಗೃತಿ ಸಮಿತಿ ಮತ್ತು ಮಹಿಳಾ ಗೃಹ ಕಾರ್ಮಿಕರ ಸಬಲೀಕರಣ ಯೋಜನೆ ಮಂಗಳೂರು ಇದರ 13ನೇ ವಾರ್ಷಿಕೋತ್ಸವ ಹೊಸ ಬೆಳಕು ಕಾರ್ಯಕ್ರಮವು ಕುಂಜತ್ತಬೈಲ್ ಎಚ್‌ಎಂಸಿ ಮೈದಾನದಲ್ಲಿ ನಡೆಯಿತು. ಈ ಸಂದರ್ಭ ಮಾಜಿ ಮೇಯರ್ ಸುನಂದಾ ಬೋಳೂರ್‌ಗೆ ಹೊಸ ಬೆಳಕು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕ ಡಾ.ವೈ. ಭರತ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಕಾರ್ಪೊರೇಟರ್ ಶರತ್ ಕುಮಾರ್ ಭಾಗವಹಿಸಿದ್ದರು.
ಸ್ತ್ರೀ ಜಾಗೃತಿ ಸಮಿತಿ, ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಕಾರ್ಯದರ್ಶಿ ಗೀತಾ ಮೆನನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾವೂರು ಪೋಲಿಸ್ ಠಾಣಾಧಿಕಾರಿ ನಳಿನಾಕ್ಷಿ, ದ.ಕ. ಉಪವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೊ, ಶಿಶು ಮತ್ತು ಮಹಿಳಾ ಯೋಜನಾಧಿಕಾರಿ ಶ್ವೇತಾ, ಕರ್ನಾಟಕ ರಾಜ್ಯ ಆಹಾರ ಅಯೋಗದ ಸದಸ್ಯ ಸುಮಂತ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ. ಆರ್. ಕೋಟ್ಯಾನ್, ಕುಂಜತ್ತಬೈಲ್ ನಂದಿನಿ ಮಹಿಳಾ ಮಂಡಲದ ಅಧ್ಯಕ್ಷ ಗೀತಾ ಶೇಖರ್, ಸಮಾಜ ಸೇವಕಿ ನಂದಪಾಯಸ್, ಜ್ಯೋತಿ ನಗರದ ವಿದ್ಯಾಜ್ಯೋತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ವಿಜಯಾ ಕ್ರಾಸ್ತ ಎ.ಸಿ, ವೈದ್ಯೆ ಡಾ. ಧೃತಿ, ಕುಂಜತ್ತಬೈಲ್ ರಂಗಸ್ವರೂಪ (ರಿ) ಅಧ್ಯಕ್ಷ ರಹ್ಮಾನ್ ಖಾನ್ ಕುಂಜತ್ತಬೈಲ್ ಅತಿಥಿಯಾಗಿದ್ದರು.
ಸಂಚಾಲಕಿ ಸಂಸಾದ್ ಕುಂಜತ್ತಬೈಲ್, ಅಧ್ಯಕ್ಷೆ ಸೀತಮ್ಮ, ಕಾರ್ಯದರ್ಶಿ ಕವಿತಾ ಶ್ರೀರಾಮ್ ಉಪಸ್ಥಿತರಿದ್ದರು. ಭಾರತಿ ಕುಂಜತ್ತಬೈಲ್ ಸ್ವಾಗತಿಸಿದರು. ಶರತ್ ಜ್ಯೋತಿನಗರ ವಂದಿಸಿದರು. ಕಾರ್ಯಕ್ರಮ ಉಸ್ತುವಾರಿ ಹನಿಷಾ ಸವಾದ್ ಮತ್ತು ಶಿವಪ್ರಸಾದ್ ಕುಡ್ಲ ಕಾರ್ಯಕ್ರಮ ನಿರೂಪಿಸಿದರು.