ಹಿರಿಯ ನಾಗರಿಕರು ನಾಪತ್ತೆ
Update: 2024-12-31 14:16 GMT
ಉಡುಪಿ, ಡಿ.31: ಕುತ್ಯಾರು ಗ್ರಾಮದ ತಂತ್ರಿ ನಿವಾಸಿ ಮಥಾಯಿ (64) ಎಂಬ ಹಿರಿಯ ನಾಗರಿಕರೊಬ್ಬರು 2022ರ ಫೆಬ್ರವರಿ 10 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 5 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಹಿಂದಿ, ಇಂಗ್ಲೀಷ್ ಹಾಗೂ ಮಲಯಾಳಂ ಭಾಷೆ ಮಾತನಾ ಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 08258-231333, 9480805421, ಕಾಪು ವೃತ್ತ ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 0820-2552133, 9480805431 ಹಾಗೂ ಶಿರ್ವಾ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2554139, 9480805451 ಅನ್ನು ಸಂಪರ್ಕಿಸ ಬಹುದು ಎಂದು ಶಿರ್ವ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.