ಪಾರಂಪಳ್ಳಿ: ಅಶಕ್ತರಿಗೆ ನೆರವು, ಸಾಧಕರಿಗೆ ಸನ್ಮಾನ
ಕೋಟ: ಪಾರಂಪಳ್ಳಿ ಪಡುಕರೆಯ ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಶಕ್ತರಿಗಾಗಿ ನಮ್ಮ ಕಾರ್ಯಕ್ರಮ ಎನ್ನುವ ಶೀರ್ಷಿಕೆಯಡಿ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ನೆರವು ಕಾರ್ಯಕ್ರಮ ಶನಿವಾರ ಪಾರಂಪಳ್ಳಿ ಪಡುಕರೆಯಲ್ಲಿ ಜರಗಿತು.
ಪೇರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿ ಯಕ್ಷಗಾನ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಯಕ್ಷಗಾನ ಕಾರ್ಯಕ್ರಮ ದಿಂದ ಒಗ್ಗೂಡಿಸಿ ಮಿಗತೆ ಹಣವನ್ನು ಸ್ಥಳೀಯ ಅನಾರೋಗ್ಯ ಪೀಡಿತರಿಗೆ ಸುಮಾರು ಒಂದು ಲಕ್ಷ ರೂ ಹಣವನ್ನು ಹಸ್ತಾಂತರಿಸಲಾಯಿತು.
ಸಾಧಕ ಸಮಾಜ ಸೇವಕರಾದ ಮಂಜುನಾಥ ಉಪಾಧ್ಯ, ಮುಹಮ್ಮದ್ ಆಸೀಫ್, ಜಾನಪದ ವಿಭಾಗದ ಗುಂಡು ಪೂಜಾರಿ, ಅಗ್ನಿಶಾಮಕ ದಳದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ನಾಗೇಶ್ ಪೂಜಾರಿ, ಇಂಜಿನಿಯರಿಂಗ್ ರ್ಯಾಂಕ್ ವಿಜೇತ ವಿದ್ಯಾರ್ಥಿ ಶ್ರೀರಾಜ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಗೀತಾ ಶಂಭು ಪೂಜಾರಿ, ರಾಜೇಶ್ ಉಪಾಧ್ಯಾಯ, ಪೇರ್ಡೂರು ಮೇಳದ ಮ್ಯಾನೇಜರ್ ಸುಬ್ರಹ್ಮಣ್ಯ ಶೆಟ್ಟಿ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕ್ಲಬ್‌ನ ದೇವೇಂದ್ರ ಶ್ರೀಯಾನ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.