ಮಣಿಪಾಲ: ಬಿವಿಟಿಯಿಂದ ತೋಟಗಾರಿಕೆ ತರಬೇತಿ
ಮಣಿಪಾಲ ಡಿ.30: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರು ಕಿಚನ್ ಗಾರ್ಡನ್, ತಾರಸಿ ಕೈತೋಟ, ಕಸಿ ಕಟ್ಟುವುದು ಮತ್ತು ನರ್ಸರಿ ಇತ್ಯಾದಿ ವಿಷಯಗಳ ಅರ್ಧ ದಿನದ ಮಾಹಿತಿ ಕಾರ್ಯಕ್ರಮವನ್ನು ಜನವರಿ ತಿಂಗಳಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದಲ್ಲಿ ಆಯೋಜಿಸಲಿದೆ.
ಇದರಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕೈತೋಟ ಮತ್ತು ತಾರಸಿ ಕೃಷಿಯ ಪ್ರಾಮುಖ್ಯತೆ, ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವ ವಿಧಾನ, ಸಾವಯವ ಗೊಬ್ಬರದ ತಯಾರಿ, ಬಡ್ಡಿಂಗ್, ಗ್ರಾಪ್ಟಿಂಗ್, ಲೆಯರಿಂಗ್, ತಾರಸಿ, ನರ್ಸರಿ, ಕೈತೋಟ ಇತ್ಯಾದಿ ಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಿದ್ದಾರೆ.
ತರಬೇತಿಯು ಉಚಿತವಾಗಿದ್ದು, ಆಸಕ್ತರು ಕೂಡಲೇ ಫೋನ್ ಮೂಲಕ ಹೆಸರು ನೊಂದಾಯಿಸಬಹುದು (ಬಿವಿಟಿ ಫೋನ್ ನಂ.0820- 2570263 ಅಥವಾ ಮೊಬೈಲ್ ಸಂಖ್ಯೆ: 8618498274). ಆಸಕ್ತರು ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಭಾರತೀಯ ವಿಕಾಸ ಟ್ರಸ್ಟ್, ಅನಂತ, ಪೆರಂಪಳ್ಳಿ, ಮಣಿಪಾಲ- ಅಂಬಾಗಿಲು ರಸ್ತೆ, ಉಡುಪಿ- 576102 ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.