ಕಲ್ಸಂಕದಲ್ಲಿ ವೈಜ್ಞಾನಿಕವಾಗಿ ಸಿಗ್ನಲ್‌ಲೈಟ್ ಅಳವಡಿಕೆ: ಪ್ರಭಾಕರ ಪೂಜಾರಿ

Update: 2024-12-30 15:03 GMT

ಉಡುಪಿ, ಡಿ.30: ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಸಂಚಾರದಲ್ಲಿ ಸಾಕಷ್ಟು ತೊಂದರೆ ಉಂಟಾಗು ತ್ತಿದೆ. ಈ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್‌ನಲ್ಲಿ ವೈಜ್ಞಾನಿಕವಾಗಿ ಸಿಗ್ನಲ್ ಲೈಟ್ ಅಳವಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸುಮಾರು 60 ರಿಂದ 70 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.

ಉಡುಪಿ ನಗರಸಭೆಯ ವತಿಯಿಂದ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಉಡುಪಿಯಿಂದ ಗುಂಡಿಬೈಲು ಕಡೆಗೆ ಸಂಚರಿಸುವ ವಾಹನಗಳಿಗೆ ಫ್ರೀ ಲೆಪ್ಟ್ ಮಾಡಿಕೊಡಲಾಗುವುದು. ಯೂಟರ್ನ್ ಇರುವ ಕಡೆಗಳಲ್ಲಿ ತಳ್ಳುಗಾಡಿ ಗಳಲ್ಲಿ ವ್ಯಾಪಾರ ನಡೆಸದಂತೆ ರ್ನಿಬಂಧಿಸಲಾಗುವುದು. ಗುಂಡಿ ಬೈಲು, ಆಭರಣ ರಸ್ತೆ, ಬನ್ನಂಜೆ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ನೋಟಿಸ್ ನೀಡಿ ತೆರವುಗೊಳಿಸಲಾ ಗುವುದು. ಮುಂದೆ ಅವರಿಗೆ ಬೇರೆ ಕಡೆ ಸೂಕ್ತ ಜಾಗದಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿ ಕೊಡಲಾಗುವುದು. ನಗರದಲ್ಲಿ ಗೂಡಂಗಡಿಗಳಿಗೆ ಏಕರೂಪ ವಿನ್ಯಾಸ ರಚಿಸ ಲಾಗುವುದು ಎಂದರು.

ನಗರಸಭಾ ಸದಸ್ಯೆ ಸರಿತಾ ಹರೀಶ್‌ರಾಮ್ ಮಾತನಾಡಿ, ನಗರಸಭೆ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ರಸ್ತೆ ಬದಿ ಕಸ ಎಸೆಯುವ ಸ್ಥಳಗಳನ್ನು ಈಗಾಗಲೇ ಬ್ಲಾಕ್ ಸ್ಪಾಟ್‌ಗಳಾಗಿ ಗುರುತಿಸಿದ್ದು, ಕಸತಂದು ಹಾಕುವವರನ್ನು ಪತ್ತೆ ಹಚ್ಚಲು ಇಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಮಂಜುನಾಥ ಮಣಿಪಾಲ ಮಾತನಾಡಿ, ಮಣಿಪಾಲದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಬಸ್ ನಿಲ್ದಾಣದಿಂದ ಈಶ್ವರನಗರದವರೆಗೆ ಓವರ್ ಬ್ರಿಜ್ಡ್ ನಿರ್ಮಿಸಿದರೆ ಉತ್ತಮ. ಮಣಿಪಾಲದಲ್ಲಿ ಸಂತೆ ಮಾರುಕಟ್ಟೆಗೆ ಜಾಗ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಗೊಳಿಸುವಂತೆ ಮನವಿ ಮಾಡಿದರು.

ಸದಸ್ಯ ವಿಜಯ ಕೊಡವೂರು ಮಾತನಾಡಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ, ಲೆಕ್ಕಾಧಿಕಾರಿ ಸಿ.ಆರ್.ದೇವಾಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News