ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಪ್ರಾರಂಭ
Update: 2025-01-09 16:40 GMT
ಉಡುಪಿ, ಜ.9: ಪರ್ಯಾಯ ಶ್ರೀಪುತ್ತಿಗೆಮಠದ ಆಶ್ರಯದಲ್ಲಿ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಇಂದು ಪ್ರಾರಂಭ ಗೊಂಡಿದೆ. ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆದು ಬಳಿಕ ಎರಡು ರಥಗಳ ರಥೋತ್ಸವ ನಡೆಯಿತು.
ವಾರ್ಷಿಕ ಸಪ್ತೋತ್ಸವ ಇಂದಿನಿಂದ ಜ.15ರವರೆಗೆ ನಡೆಯಲಿದೆ. ಜ.14ರಂದು ಮಕರ ಸಂಕ್ರಮಣದಂದು ಮೂರು ತೇರು ಉತ್ಸವ ನಡೆದರೆ, ಜ.15ರಂದು ಚೂರ್ಣೋತ್ಸವ ಹಗಲು ತೇರು ನಡೆಯಲಿದೆ.
ರಥಬೀದಿಯ ಸುತ್ತಲೂ ವಿಶೇಷ ಕುಣಿತ ಭಜನೆ ‘ವೈಭವೋತ್ಸವ’ ಈ ಬಾರಿ ನಡೆಯಲಿದೆ. ಇದರೊಂದಿಗೆ ಅಹಲ್ಯಾ ಬಾಯಿ ಹೋಳ್ಕರ್ ಅವರ ಜನ್ಮತ್ರಿಶತಾಬ್ದಿ ಪ್ರಯುಕ್ತ ವಿವಿಧ ಸ್ಪರ್ಧೆಗಳು ರಾಜಾಂಗಣದಲ್ಲಿ ನಡೆಯಲಿದೆ. ಅಲ್ಲದೇ ಪ್ರತಿದಿನ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ರಾಜಾಂಗಣದಲ್ಲಿ ನಡೆಯಲಿದೆ.