ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ: ‘ಈದಿ’ಗೆ ಪ್ರಥಮ, ‘ದಿ ಫೈಯರ್’ಗೆ ದ್ವಿತೀಯ ಬಹುಮಾನ
ಉಡುಪಿ, ಜ.11: ತುಳುಕೂಟ ಉಡುಪಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಿದ್ದ 23ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರು ತಂಡ ಪ್ರದರ್ಶಿಸಿದ ‘ಈದಿ’ ನಾಟಕ ಪ್ರಥಮ ಬಹುಮಾನದೊಂದಿಗೆ 20,000ರೂ. ನಗದು, ಶಾಶ್ವತ ಫಲಕ ಹಾಗೂ ಪ್ರಮಾಣ ಪತ್ರವನ್ನು ಗೆದ್ದುಕೊಂಡಿದೆ.
ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಸಂತೋಷ್ ನಾಯಕ್ ಪಟ್ಲ ನಿರ್ದೇಶನದಲ್ಲಿ ಪ್ರದರ್ಶಿಸಿದ ಎಡುವರ್ಡೊ ಗೆಲಿಯಾನೋರ ‘ದಿ ಫೈಯರ್’ ದ್ವಿತೀಯ ಶ್ರೇಷ್ಠ ನಾಟಕವಾಗಿ ಆಯ್ಕೆಯಾಗಿ 15,000ರೂ. ನಗದು, ಶಾಶ್ವತ ಫಲಕ ಹಾಗೂ ಪ್ರಮಾಣ ಪತ್ರವನ್ನು ಪಡೆಯಲಿದೆ. ಮುಂಬಯಿಯ ರಂಗಮಿಲನ ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಸೋಕ್ರಟಿಸ್ ತೃತೀಯ ಅತ್ಯುತ್ತಮ ನಾಟಕವೆಂದು ಆಯ್ಕೆಯಾಗಿದ್ದು, 10,000ರೂ. ನಗದು, ಫಲಕ ಹಾಗೂ ಪ್ರಮಾಣ ಪತ್ರ ಪಡೆಯಲಿದೆ.
ವಿದ್ದು ಉಚ್ಚಿಲ್ ಶ್ರೇಷ್ಠ ನಿರ್ದೇಶಕ: ಸ್ಪರ್ಧೆಯಲ್ಲಿ ಶ್ರೇಷ್ಠ ನಿರ್ದೇಶನ ಕ್ಕಿರುವ ಪ್ರಥಮ ಬಹುಮಾನ 1000 ರೂ. ಹಾಗೂ ಶಾಶ್ವತ ಫಲಕವು ಸ್ಪರ್ಧಾಕೂಟದ ಅತ್ಯುತ್ತಮ ನಾಟಕವೆಂದು ಆಯ್ಕೆಯಾದ ‘ಈದಿ’ ನಾಟಕದ ನಿರ್ದೇಶಕ ವಿದ್ದು ಉಚ್ಚಿಲ್‌ರ ಪಾಲಾಗಿದೆ. ಸಂತೋಷ್ ನಾಯಕ್ ಪಟ್ಲ ಅವರು ದ್ವಿತೀಯ ಹಾಗೂ ಮನೋಹರ ಶೆಟ್ಟಿ ನಂದಳಿಕೆ ತೃತೀಯ ಬಹುಮಾನ ಪಡೆದಿದ್ದಾರೆ. ಉಳಿದ ಪ್ರಶಸ್ತಿಗಳ ವಿವರ ಹೀಗಿದೆ.
ಶ್ರೇಷ್ಠ ರಂಗ ಪರಿಕರ/ಪ್ರಸಾದನ: ಪ್ರಥಮ ಬಹುಮಾನ 1000 ರೂ. ನಗದು ಸಹಿತ ಸುಮನಸಾ ಕೊಡವೂರು ಉಡುಪಿ, ದ್ವಿತೀಯ: ರಂಗಮಿಲನ ಮುಂಬಯಿ, ತೃತೀಯ: ಕರಾವಳಿ ಕಲಾವಿದರು ಮಲ್ಪೆ.
ಶ್ರೇಷ್ಠ ಬೆಳಕು: ಪ್ರಥಮ ಬಹುಮಾನ 1000 ರೂ.ನಗದು ಸಹಿತ ಪ್ರಥ್ವಿನ್ ಕೆ ವಾಸು, ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ ‘ದಿ ಫೈಯರ್’, ದ್ವಿತೀಯ: ಪ್ರವೀಣ್ ಜಿ. ಕೊಡವೂರು, ನಿಖಿಲ್ ಮೈಂದನ್, ನಾಟಕ:ಈದಿ, ತಂಡ:ಸುಮನಸಾ ಕೊಡವೂರು, ತೃತೀಯ: ಪ್ರವೀಣ್ ಜಿ. ಕೊಡವೂರು, ನಾಟಕ:ಸೋಕ್ರಟಿಸ್, ತಂಡ:ರಂಗಮಿಲನ ಮುಂಬೈ.
ಶ್ರೇಷ್ಠ ಸಂಗೀತ: ಪ್ರಥಮ ಬಹುಮಾನ 1000 ರೂ.ನಗದು ಸಹಿತ ಶೋಧನ್ ಎರ್ಮಾಳ್, ನಾಟಕ: ಈದಿ, ತಂಡ: ಸುಮನಸಾ ಕೊಡವೂರು, ದ್ವಿತೀಯ: ಅನಿಲ್ ಕುಮಾರ್ ಉದ್ಯಾವರ, ನಾಟಕ: ದಿ ಫೈಯರ್, ತಂಡ: ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ, ತೃತೀಯ: ದಿವಾಕರ್ ಕಟೀಲ್, ನಾಟಕ: ಸೋಕ್ರಟಿಸ್, ತಂಡ:ರಂಗ ಮಿಲನ, ಮುಂಬೈ.
ಶ್ರೇಷ್ಠ ನಟ: ಪ್ರಥಮ ಬಹುಮಾನ 1000ರೂ. ನಗದು ಸಹಿತ ಸುರೇಂದ್ರ ಕುಮಾರ್ ಮಾರ್ನಾಡ್, ನಾಟಕ:ಸೋಕ್ರಟಿಸ್, ತಂಡ: ರಂಗಮಿಲನ ಮುಂಬಯಿ, ದ್ವಿತೀಯ: ನಾರಾಯಣ ಪಾತ್ರಧಾರಿ ರಾಜೇಶ್ ಭಟ್ ಪಣಿಯಾಡಿ, ನಾಟಕ: ತುದೆ ದಾಂಟಿ ಬೊಕ್ಕ, ತಂಡ:ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ ಉಡುಪಿ, ತೃತೀಯ: ಮಹಮ್ಮದ್ ಪಾತ್ರಧಾರಿ ನಾಗೇಶ್ ಪ್ರಸಾದ್, ನಾಟಕ: ಈದಿ, ತಂಡ:ಸುಮನಸಾ ಕೊಡವೂರು.
ಶ್ರೇಷ್ಠ ನಟಿ: ಪ್ರಥಮ ಬಹುಮಾನ 1,000ರೂ.ನಗದು ಸಹಿತ ರೋಶ್ನಿ ಪಾತ್ರಧಾರಿಣಿ ಧೃತಿ ಸಂತೋಷ್, ನಾಟಕ:ಈದಿ, ತಂಡ:ಸುಮನಸಾ ಕೊಡವೂರು, ದ್ವಿತೀಯ: ಸೋಕ್ರಟಿಸ್ ನಾಟಕದ ಸಾಂತಿಪೆ ಪಾತ್ರಧಾರಿ ದೀಕ್ಷಾ ದೇವಾಡಿಗ ತಂಡ:ರಂಗಮಿಲನ, ಮುಂಬಯಿ, ತೃತೀಯ: ತುದೆ ದಾಂಟಿ ಬೊಕ್ಕ ನಾಟಕದ ಪದ್ಮಾವತಿ ಪಾತ್ರಧಾರಿ ಶಿಲ್ಪಾ ಜೋಶಿ ತಂಡ: ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ ಉಡುಪಿ.
ತೀರ್ಪುಗಾರರ ಮೆಚ್ಚುಗೆ ಪಡೆದವರು
ನಟರು: 1.ಪೆರ್ಗ ನಾಟಕದ ದ್ಯಾವಪ್ಪೆ ಪಾತ್ರಧಾರಿ ನೂತನ್ ಕುಮಾರ್ ಕೊಡಂಕೂರು, ತಂಡ: ಕರಾವಳಿ ಕಲಾವಿದರು ಮಲ್ಪೆ, 2.ದಿ ಫೈಯರ್ ನಾಟಕದ ವ್ಯಕ್ತಿ 5, ಕೊಲಂಬಸ್, ಪೆಡ್ರೋ ಪಾತ್ರಧಾರಿ ದೀಪಕ್ ಜೈನ್ ತಂಡ:ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ, 3. ಈದಿ ನಾಟಕದ ಪಂಡಿತ್ ನಾರಾಯಣ್ ಹಕ್ಸರ್ ಪಾತ್ರಧಾರಿ ಅಕ್ಷತ್ ಅಮೀನ್ ತಂಡ:ಸುಮನಸಾ ಕೊಡವೂರು, 4. ಸೋಕ್ರಟಿಸ್ ನಾಟಕದ ಪ್ಲಾಟೋ ಪಾತ್ರಧಾರಿ ಲತೇಶ್ ಪೂಜಾರಿ ತಂಡ: ರಂಗಮಿಲನ, ಮುಂಬಯಿ.
ನಟಿಯರು: 1.ಪೆರ್ಗ ನಾಟಕದ ಸಂಕಮ್ಮಕ್ಕೆ ಪಾತ್ರಧಾರಿಣಿ ಚಂದ್ರಕಲಾ ರಾವ್ ಕದಿಕೆ ತಂಡ:ಕರಾವಳಿ ಕಲಾವಿದರು ಮಲ್ಪೆ. 2.ದಿ ಫೈಯರ್ ನಾಟಕದ ವ್ಯಕ್ತಿ 1, ಮೊದಲ ಹೆಣ್ಣು, ಜುವಾನ ಪಾತ್ರಧಾರಿ ಸಹನಾ ಪಟ್ಲ ತಂಡ: ಭೂಮಿಗೀತ ಸಾಂಸ್ಕ್ರತಿಕ ವೇದಿಕೆ, ಪಟ್ಲ. 3. ದಿ ಫೈಯರ್ ನಾಟಕದ ವ್ಯಕ್ತಿ 2, ಸೃಷ್ಟಿ, ಜೂಜಿನ ಹೆಣ್ಣು ಪಾತ್ರಧಾರಿಣಿ ವಂಶಿ ಆರ್. ಅಮೀನ್ ತಂಡ:ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ. 4. ಈದಿ ನಾಟಕದ ಝರೀನಾ ಪಾತ್ರಧಾರಿಣಿ ರಾಧಿಕಾ ದಿವಾಕರ್ ತಂಡ: ಸುಮನಸಾ ಕೊಡವೂರು.
ಬಾಲನಟ/ನಟಿಯರು: 1.ಅದ್ವೈತ, ಕೇದಾರ, ಆಶ್ರಿತ, ತುದೆ ದಾಂಟಿ ಬೊಕ್ಕ ನಾಟಕ ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ ಉಡುಪಿ.
23ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಡಾ. ಗಣನಾಥ ಎಕ್ಕಾರು, ಡಾ. ಭರತ್ ಕುಮಾರ್ ಪೊಲಿಪು ಮುಂಬಯಿ ಹಾಗೂ ಡಾ. ಸುಕನ್ಯ ಮಾರ್ಟಿಸ್ ಸಹಕರಿಸಿದ್ದರು ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಕೆಮ್ತೂರು ನಾಟಕ ಸ್ಪರ್ಧೆಯ ಸಂಚಾಲಕರಾದ ಬಿ. ಪ್ರಭಾಕರ ಭಂಡಾರಿ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.26ರಂದು ಪ್ರಶಸ್ತಿ ಪ್ರದಾನ
ಕೆಮ್ತೂರು ತುಳು ನಾಟಕ ಸ್ಟರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 26ರಂದು ಸಂಜೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿರುವುದು. ಸಮಾರಂಭದ ಕೊನೆಗೆ ಈ ಬಾರಿ ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.