ಸ್ವಚ್ಛತಾ ಅಭಿಯಾನದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಮುಖ್ಯ: ಪ್ರಭಾಕರ್ ಪೂಜಾರಿ
Update: 2025-01-16 13:09 GMT
ಉಡುಪಿ, ಜ.16: ನಗರವನ್ನು ಸ್ವಚ್ಛವಾಗಿಡುವಲ್ಲಿ ಸ್ಥಳೀಯ ಸಾಮಾಜಿಕ ಸಂಸ್ಥೆಗಳ ಪಾತ್ರವು ಮಹತ್ವಪೂರ್ಣವಾಗಿದ್ದು ಉಡುಪಿ ನಗರಸಭೆಯು ಈ ಸಂಸ್ಥೆಗಳ ಸಾಮಾಜಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಹೇಳಿದ್ದಾರೆ.
ಈಶ್ವರ ನಗರ ರೆಸಿಡೆನ್ಸಿಯಲ್ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆ ಮತ್ತು ಉಡುಪಿ ನಗರಸಭೆಯ ಜಂಟಿ ಆಶ್ರಯದಲ್ಲಿ ಮಣಿಪಾಲದ ಈಶ್ವರ ನಗರದಲ್ಲಿ ಶುಕ್ರವಾರ ಆಯೋಜಿಸಲಾದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಸಂಸ್ಥೆಯ ಅಧ್ಯಕ್ಷ ರಾಜವರ್ಮ ಅರಿಗ ಅಭಿಯಾನದ ನೇತೃತ್ವವನ್ನು ವಹಿಸಿದ್ದರು. ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿನಾಯಕ್ ಶೆಣೈ, ಆರೋಗ್ಯ ನಿರೀಕ್ಷಕ ಪ್ರಕಾಶ್ ಪ್ರಭು, ಆರೋಗ್ಯ ಮೇಲ್ವಿಚಾರಕ ರಾದ ಸುರೇಶ್ ಕೇಲ್ಕರ್, ಯೋಗೀಶ್, ಮನೋಹರ್ ಮೊದಲಾದವರು ಹಾಜರಿದ್ದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಅಭಿಯಾನವನ್ನು ಸಂಘಟಿಸಿದರು.