ಉಡುಪಿ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿ ರಚನೆ

Update: 2025-01-16 13:48 GMT

ಉಡುಪಿ, ಜ.16: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013ರ ಅನ್ವಯ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ತಡೆಯಲು, ಹತ್ತಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರದ ಕಾರಣದಿಂದಾಗಿ ಯಾವುದಾದರೂ ಇಲಾಖೆ, ಕಛೇರಿ ಅಥವಾ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿಯು ಸ್ಥಾಪನೆಯಾಗ ದಿದ್ದಲ್ಲಿ ಮತ್ತು ಮಾಲಕರ ವಿರುದ್ದವೇ ದೂರು ಗಳನ್ನು ಸ್ವೀಕರಿಸಲು, ಅಸಂಘಟಿತ ಕಾರ್ಮಿಕ ವಲಯದ ದೂರುಗಳನ್ನು ಸ್ವೀಕರಿಸಲು ಮತ್ತು ವಿಚಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿಯನ್ನು ರಚಿಸುವಂತೆ ಸರಕಾರ ಆದೇಶಿಸಿದೆ.

ಅದರಂತೆ ಜಿಲ್ಲೆಯಲ್ಲಿ ರಚಿಸಲಾದ ಸ್ಥಳೀಯ ದೂರು ಸಮಿತಿಗೆ ಅಧ್ಯಕ್ಷರಾಗಿ ಕುಂಜಿಬೆಟ್ಟುವಿನ ಡಾ. ನಿರ್ಮಲಾ ಕುಮಾರಿ ಕೆ ಹಾಗೂ ಸದಸ್ಯರುಗಳಾಗಿ ಬ್ರಹ್ಮಾವರ ತಾಲೂಕು ಕಲ್ಲುಗುಡ್ಡೆಯ ಗೌರಿ ಕೊರಗ, ನಾಯರ್‌ಕೇರಿಯ ಡಾ. ನಿಕೇತನ ಹಾಗೂ ನಗರದ ಕೊಳಂಬೆಯ ದಿವ್ಯಾರಾಣಿ ಪ್ರದೀಪ ಅವರನ್ನು ನೇಮಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News