ವಕ್ವಾಡಿ: ಉಚಿತ ಬೇಸಿಗೆ ಶಿಬಿರ ಉದ್ಘಾಟನೆ

Update: 2025-04-12 21:08 IST
ವಕ್ವಾಡಿ: ಉಚಿತ ಬೇಸಿಗೆ ಶಿಬಿರ ಉದ್ಘಾಟನೆ
  • whatsapp icon

ಕುಂದಾಪುರ, ಎ.12: ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇವರ ಆಶ್ರಯದಲ್ಲಿ 2ನೇ ವರ್ಷ ನಡೆಸುತ್ತಿರುವ ಉಚಿತ ಬೇಸಿಗೆ ಶಿಬಿರದ ಉದ್ಘಾಟನೆ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ವಕ್ವಾಡಿ ಫ್ರೆಂಡ್ಸ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರವೀರ್ ಶೆಟ್ಟಿ ಸಣ್‌ಗಲ್ ಮನೆ, ಸದಾಶಿವ ರಾವ್ ಅರೆಹೊಳೆ, ಉದಯಕುಮಾರ್ ಶೆಟ್ಟಿ ಪಟೇಲರಮನೆ, ವಕ್ವಾಡಿ ಫ್ರೆಂಡ್ಸ್‌ನ ಮಹಿಳಾ ಮಂಡಲದ ಅಧ್ಯಕ್ಷೆ ನಾಗರತ್ನಾ ಮೊದಲಾದವರು ಉಪಸ್ಥಿತರಿದ್ದರು.

ಐದು ದಿನಗಳ ಕಾಲ ಮಕ್ಕಳಿಗಾಗಿ ಈ ಉಚಿತ ಬೇಸಿಗೆ ಶಿಬಿರ ನಡೆಯಲಿದ್ದು ನೃತ್ಯ, ಸಂಗೀತ, ಚಿತ್ರಕಲೆ, ಕಸೂತಿ, ಪಾರಂಪರಿಕ ಮನೆಗಳ ಭೇಟಿ, ವಾಟರ್ ಪಾರ್ಕ್ ಸಹಿತ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯಲಿದೆ.

ಶಿಬಿರದ ನಿರ್ದೇಶಕ ಗಿರೀಶ್ ಆಚಾರ್, ಶಿಕ್ಷಕಿ ಸಹನಾ ಮತ್ತು ಸುಶೀಲಾ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಸ್ವಾಗತಿಸಿದರು. ಹರೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News