ಕೊಲ್ಲೂರು: ಬಾಳೆತೋಟಕ್ಕೆ ಪೆಟ್ರೋಲ್ ಸುರಿದು ಬೆಂಕಿ; ಅಪಾರ ಹಾನಿ

Update: 2025-04-15 22:51 IST
ಕೊಲ್ಲೂರು: ಬಾಳೆತೋಟಕ್ಕೆ ಪೆಟ್ರೋಲ್ ಸುರಿದು ಬೆಂಕಿ; ಅಪಾರ ಹಾನಿ
  • whatsapp icon

ಕೊಲ್ಲೂರು, ಎ.15: ಹೊಸೂರು ಗ್ರಾಮದ ಗಣಪು (62) ಎಂಬವರ ಸ್ಥಿರಾಸ್ಥಿಯಲ್ಲಿದ್ದ ತೋಟಕ್ಕೆ ರವಿವಾರ ತಡರಾತ್ರಿ ನುಗ್ಗಿದ ಕಿಡಿಗೇಡಿಗಳು ತೋಟಕ್ಕೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಅಲ್ಲಿದ್ದ ಬಾಳೆ ಸೇರಿದಂತೆ ವಿವಿದ ತೋಟಗಾರಿಕಾ ಬೆಳೆಯನ್ನು ನಾಶಗೊಳಿಸಿ ಅಪಾರ ಹಾನಿಯುಂಟು ಮಾಡಿ, ಕೊಲೆ ಬೆದರಿಕೆ ಒಡ್ಡಿದ ಘಟನೆ ವರದಿಯಾಗಿದೆ.

ಗಣಪು ಅವರು ಹೊಸೂರು ಗ್ರಾಮದಲ್ಲಿರುವ ತಮ್ಮ ಸ್ವಾಧೀನದ ಸ್ಥಿರಾಸ್ತಿಯಲ್ಲಿ ವಾಸ್ತವ್ಯದಲ್ಲಿದ್ದು, ತೋಟಕ್ಕೆ ರಕ್ಷಣಾ ಬೇಲಿ ನಿರ್ಮಿಸಿ ಬಾಳೆ, ತೆಂಗಿನ ಕೃಷಿ ಮಾಡಿಕೊಂಡಿದ್ದಾರೆ. ಎ.14ರ ತಡರಾತ್ರಿ1:00ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಮಲಗಿದವರು ಎಚ್ಚರಗೊಂಡು ನೋಡಿದಾಗ ಅದೇ ಗ್ರಾಮದ ಆರೋಪಿಗಳಾದ ನಾಗರತ್ನ, ಸಿಂಗಾರಿ ಮತ್ತು ಇತರೆ 2-3 ಜನ ಗಂಡಸರು ಸೇರಿ ಗಣಪು ಅವರ ಬೇಲಿ, ತೋಟದಲ್ಲಿದ್ದ ಕೃಷಿ, ಬಾಳೆ ಗಿಡಕ್ಕೆ ಮತ್ತು ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಿದ್ದಾರೆ ಎಂದು ಕೊಲ್ಲೂರು ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗಣಪು ಅವರು ಬೊಬ್ಬೆ ಹಾಕಿದ್ದು, ಮೂವರು ಗಂಡಸರು ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ ನಾಗರತ್ನ ಕೈಯಲ್ಲಿ ಪೆಟ್ರೋಲ್ ಹಾಗೂ ಸಿಂಗಾರಿ ಕೈಯಲ್ಲಿ ಕತ್ತಿ ಹಿಡಿದು ಅಲ್ಲಿದ್ದ ಕೆಲ ಬಾಳೆ ಗಿಡಗಳನ್ನು ಕಡಿದು ಹಾಗೂ ಕಿತ್ತು ಹಾಕಿದ್ದಾರೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

ನಿನಗೆ ಎಚ್ಚರವಾಗದೇ ಇದ್ದಿದ್ದರೇ ಸುಟ್ಟು ಕರಕಲಾಗುತ್ತಿದ್ದೆ. ಇನ್ನು ಮುಂದೆ ಕೂಡ ನಿನ್ನನ್ನು ಬೆಂಕಿ ಹಾಕಿ ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಗಣಪ ದೂರಿನಲ್ಲಿ ತಿಳಿಸಿದ್ದು ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News