ಕಾರ್ಕಳ: ಕೇಂದ್ರ ಸರಕಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2025-04-12 21:35 IST
ಕಾರ್ಕಳ: ಕೇಂದ್ರ ಸರಕಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
  • whatsapp icon

ಕಾರ್ಕಳ: ಜನೋಪಯೋಗಿ ಯೋಜನೆಗಳನ್ನು ಜನರಿಗೆ ನೀಡುತ್ತಿರುವ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಉದ್ದೇಶಪೂರ್ವಕ ಜನಾಕ್ರೋಶ ಸಭೆ ನಡೆಸುತ್ತಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಗ್ಯಾಸ್ ಬೆಲೆ ಏರಿಸಿ ರಾಜ್ಯ ಬಿಜೆಪಿಗೆ ಕಪಾಳಮೋಕ್ಷ ನೀಡಿದೆ ಎಂದು ಕಾಂಗ್ರೆಸ್ ಮುಖಂಡ ಉದಯಕುಮಾರ್ ಶಟ್ಟಿ ಮುನಿಯಾಲು ಹೇಳಿದರು.

ಅವರು ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ಇದರ ವತಿಯಿಂದ ಕೇಂದ್ರ ಬಿಜೆಪಿ ಸರಕಾರದ ಬೆಲೆ ಏರಿಕೆ ವಿರುದ್ಧ ಶನಿವಾರ ಕಾರ್ಕಳ ಬಸ್ ಸ್ಟೇಂಡ್ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಾರ್ಕಳ ಶಾಸಕರು ಧರ್ಮ ಭಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಳಿಸಿದ ಹಾಗೆ ಕಾರ್ಕಳದಲ್ಲೂ ಬಿಜೆಪಿಯನ್ನು ಅಳಿಸಬೇಕಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಟ್ಟುವ ಕಾರ್ಯ ಹಳ್ಳಿಗಳಲ್ಲಿ ನಡೆಯಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಬಿಜೆಪಿ ಪ್ರತಿಭಟನೆ ಸಮಗ್ರತೆ, ಸಾರ್ವಭೌಮತೆ ಧಕ್ಜೆ ತರುವಂತಿರಬಾರದು. ಕೋಮು ಸೌಹಾರ್ಧತೆ ಧಕ್ಕೆತರುವ ರೀತಿ ನಡೆದುಕೊಳ್ಳುವ ರೀತಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.ಎಪಿಎಲ್ ಕಾರ್ಡ್ ಹೊಂದಿದ 99% ಗೃಹಲಕ್ಷ್ಮಿ ಪಡೆಯುತ್ತಿದ್ದಾರೆ. ಮಾನ ಮರ್ಯಾದಿ ಇದ್ದರೆ ಇವತ್ತೆ ನಿಮ್ಮ ಮಡದಿಯರು ಕೊಡುವ ಗೃಹಲಕ್ಷ್ಮಿ ನಿರಾಕರಿ ಸಲಿ ಎಂದು ಬಿಜೆಪಿಗೆ ಸವಾಲು ಎಸೆದರು. ಬಿಜೆಪಿಯವರು ಅರ್ಥಶಾಸ್ತ್ರ ಓದಿಲ್ಲ. ಪಂಚ ಗ್ಯಾರಂಟಿಗಳಿಂದ ಜನರಲ್ಲಿ ಆರ್ಥಿಕ ಕ್ರೋಡಿಕರಣವಾಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಪಂಚ ಗ್ಯಾರಂಟಿಯನ್ನು ಬಿಜೆಪಿ ವಿರೋಧಿಸುತ್ತಿದೆ. ಕಾರ್ಕಳ ಶಾಸಕರು ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ಬೇಕು ಎಂದು ವಿಧಾನ‌ ಮಂಡಲದಲ್ಲಿ ಕೇಳಿದ್ದಾರೆ ಎಂದು ಹೇಳಿ, ಬಿಜೆಪಿ ಜನಾಕ್ರೋಶ ಹಾಲಿನ ದರ 2 ರೂ ಜಾಸ್ತಿ ಆಗಿದಕ್ಕೆ ಮಾಡಿದೆ. ಆದರೆ ಕೇಂದ್ರ ಸರಕಾರ ಗ್ಯಾಸ್ ಗೆ 50 ರೂ ಏರಿಸಿದೆ. ಬೆಲೆ ಏರಿಕೆ ವಿರುದ್ದ ಹೋರಾಡಿದ ಇಲ್ಲಿನ ಶಾಸಕರಿಗೆ ಕಾಣಿಸು ತಿಲ್ಲವೆ? ಎಂದ ಅವರು ಯುವ ಕಾಂಗ್ರೆಸ್ ಜನಪರ ಸಂಘಟನೆ ಎಂದರು. ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿಪ್ರಸ್ತಾವನೆಗೈದು ಕೇಂದ್ರದ ಬೆಲೆ ಏರಿಕೆ ವಿರುದ್ಧ ಯುವ ಶಕ್ತಿ ಎದ್ದಿದೆ. ಸಾರ್ವಜನಿಕರಿಗೆ ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದೇವೆ ಎಂದರು.ಬ್ಲಾಕ್ ಕಾಂಗ್ರೆಸ್ ಮುಖಂಡ ಸುಧಾಕರ್ ಕೋಟ್ಯಾನ್, ಪುರಸಭೆಯ ಸದಸ್ಯ ವಿವೇಕ್ ಶೆಣೈ, ಅಶ್ಪಾಕ್ ಅಹ್ಮದ್, ಯುವ ಕಾಂಗ್ರೆಸ್ ಮುಖಂಡ ರಾಜೇಶ್ ದೇವಾಡಿಗ, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News