ಪಂಚ ಗ್ಯಾರಂಟಿ ಯೋಜನೆಯನ್ನು ಅವಮಾನಿಸಿ ಸುದ್ದಿ ಪ್ರಕಟಿಸಿದ ನ್ಯೂಸ್ ಕಾರ್ಕಳ ವೆಬ್‌ಸೈಟ್‌; ಕಾಂಗ್ರೆಸ್‌ನಿಂದ ದೂರು

Update: 2025-03-29 14:53 IST
ಪಂಚ ಗ್ಯಾರಂಟಿ ಯೋಜನೆಯನ್ನು ಅವಮಾನಿಸಿ ಸುದ್ದಿ ಪ್ರಕಟಿಸಿದ ನ್ಯೂಸ್ ಕಾರ್ಕಳ ವೆಬ್‌ಸೈಟ್‌; ಕಾಂಗ್ರೆಸ್‌ನಿಂದ ದೂರು
  • whatsapp icon

ಕಾರ್ಕಳ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯನ್ನು ಅವಮಾನಿಸಿ ಸುದ್ದಿ ಪ್ರಕಟಿಸಿರುವ ನ್ಯೂಸ್ ಕಾರ್ಕಳ ಎಂಬ ವೆಬ್‌ಸೈಟ್‌‌‌ ನ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಯೋಗ ಕಾರ್ಕಳ ನಗರ ಠಾಣೆ ಯಲ್ಲಿ ದೂರು ದಾಖಲಿಸಿದೆ.

ಕೋಟ್ಯಂತರ ಜನರು ಫಲಾನುಭಾವಿಗಳಾಗಿರುವ ಗ್ಯಾರಂಟಿ ಯೋಜನೆಯ ಬಗ್ಗೆ ಅವಹೇಳನಕಾರಿಯಾಗಿ "ಹುಚ್ಚು ಯೋಜನೆ" ಎಂಬ ಆಕ್ಷೇಪಾರ್ಹ ಪದ ಬಳಕೆಯ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಅವರ ನೇತೃತ್ವದಲ್ಲಿ ನಗರ ಠಾಣೆಗೆ ತೆರಳಿ ಮನವಿ ಸಲ್ಲಿಸಿದ ನೂರಾರು ಕಾರ್ಯಕರ್ತರು ಮುಂದೆ ಇಂತಹ ಅವಹೇಳನಕಾರಿ ಸುದ್ದಿ ಪ್ರಕಟಿಸಿದರೆ ನ್ಯೂಸ್ ಚಾನಲ್ ಕಚೇರಿ ಮುಂಭಾಗದಲ್ಲೇ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಹಾಗೂ ಸಮಿತಿಯ ಸದಸ್ಯರು ಹಾಗೂ ಕೆ, ಎಮ್, ಎಫ್ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ, ಮಲಿಕ್ ಅತ್ತುರ್, ಗ್ರಾಮೀಣ ಸಮಿತಿ ಅಧ್ಯಕ್ಷರಾದ ಸುಬೋದ್ ಶೆಟ್ಟಿ, ರುಕ್ಮಯ ಶೆಟ್ಟಿಗಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಬ್ಬೀರ್ ಮಿಯ್ಯಾರು, ಜಾಲತಾಣದ ಅದ್ಯಕ್ಷ ಸಂತೋಷ್ ದೇವಾಡಿಗ, ನಗರ ಅಧ್ಯಕ್ಷ ರಾದ ರಾಜೇಂದ್ರ ದೇವಾಡಿಗ, ಭೂ ನ್ಯಾಯ ಮಂಡಳಿಯ ಸದಸ್ಯ ಸುನಿಲ್ ಭಂಡಾರಿ, ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಪ್ರತಿಮಾ ರಾಣೆ, ಯುವ ಕಾಂಗ್ರೆಸ್ ಪ್ರದಾನ ಕಾರ್ಯ ದರ್ಶಿ ಮಂಜುನಾಥ್ ಜೋಗಿ, ಮಹಿಳಾ ಪದಾಧಿಕಾರಿಗಳಾದ ಶೋಭಾ ಪ್ರಸಾದ್, ಆಶಾ ಬೈಲೂರು, ಕಾಂತಿ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News