ಕಾರ್ಕಳ: ಎಪ್ರಿಲ್ 8 ರಿಂದ ಕಲಾ ಸಿಂಚನ-2025
ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ ಮೈನ್ ಕಾರ್ಕಳ ಇಲ್ಲಿ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಬೇಸಿಗೆ ಶಿಬಿರ ಕಲಾ ಸಿಂಚನ 2025 ಒಂದನೇ ತರಗತಿಯಿಂದ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ಕಳದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಏಪ್ರಿಲ್ ಎಂಟರಿಂದ ಹದಿನಾಲ್ಕರವರೆಗೆ ನಡೆಯಲಿದೆ.
ಶಿಬಿರವನ್ನು ಶಾಲೆಯ ಹಿರಿಯ ವಿದ್ಯಾರ್ಥಿ, ಲೆಕ್ಕಪರಿಶೋಧಕ, ಕೊಡುಗೈ ದಾನಿ ಕಾರ್ಕಳ ಕಮಲಾಕ್ಷ ಕಾಮತ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಸ್ರೋದ ಖ್ಯಾತ ವಿಜ್ಞಾನಿ ಜನಾರ್ಧನ ಇಡ್ಯಾ, ಅಂತಾರಾಷ್ಟ್ರೀಯ ಬ್ಯಾಂಕ್ ಕಾರ್ಯನಿರ್ವಾಹಕ ನಿವೃತ್ತ ವೈ ಮೋಹನ್ ಶೆಣೈ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್ ಆರ್ , ಬಿ ಆರ್ ಸಿ ಕೋಆರ್ಡಿನೇಟರ್ ಸಂತೋಷ್ ಕುಮಾರ್ ಶೆಟ್ಟಿ, ಇ ಸಿ ಓ ಬಾಲಕೃಷ್ಣ, ಪ್ರಕಾಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ರಂಗ ಪಯಣ, ಕಾಗದ ಕತ್ತರಿ , ಮೆದುಳಿಗೆ ಮೇವು, ಯೋಗ ಭಾಗ್ಯ , ಜನಪದ ಲೋಕ, ಶಿಕ್ಷಣ ಮತ್ತು ಬದುಕು, ಪ್ರಶ್ನೆ ಲೋಕ ,ವರ್ಲಿ ಅನಾವರಣ, ಕಸದಿಂದ ರಸ , ಮಣ್ಣಿನ ಬಣ್ಣ , ಚಿಣ್ಣರ ಗಾನ , ಜ್ಞಾನಲೋಕ, ಆಟಿಕೆ ತಯಾರಿ, ವರ್ಣ ಸಿಂಚನ, ಮುಖವರ್ಣಿಕೆ, ಚಟ್ ಪಟ್ ಚಿತ್ರ, ಮುಖವಾಡ ತಯಾರಿ, ಮಾಯಾಲೋಕ, ಜೀವನದರ್ಶನ ಸಾಹಿತ್ಯ ಕೃಷಿ, ರಂಗ ಆಟಗಳು ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುವುದು.
ಶಿಬಿರದಲ್ಲಿ ವಿಶೇಷವಾಗಿ ನನ್ನ ಬಾಲ್ಯ ದಿನದ ಅತಿಥಿಗಳಾಗಿ ಲೆಕ್ಕಪರಿಶೋಧಕ ಹಾಗೂ ದಾನಿಗಳು ಆಗಿರುವ ಶ ಕಾರ್ಕಳ ಕಮಲಾಕ್ಷ ಕಾಮತ್, ಕಾರ್ಕಳದ ಆಯುರ್ವೇದ ತಜ್ಞರಾದ ಡಾ. ಭರತೇಶ್ ಅಧಿರಾಜ್, ನಿಟ್ಟೆ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿಯ ನಿರ್ದೇಶಕರಾದ ಪ್ರೊ. ಎ ಯೋಗೀಶ್ ಹೆಗ್ಡೆ, ನಿವೃತ್ತ ಮುಖ್ಯೋಪಾಧ್ಯಾಯ,ಹಿರಿಯ ಸಾಹಿತಿಗಳಾದ ಮುನಿರಾಜ ರೆಂಜಾಳ, ನಿಟ್ಟೆಯ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಪಲ್ಲವಿ ಕೆ. ಎಸ್, ಕಾರ್ಕಳದ ನಿವೃತ್ತ ತಹಶೀಲ್ದಾರರಾದ ಟಿ. ಜಿ ಗುರುಪ್ರಸಾದ್ ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಕಮಲ್ ಅಹಮದ್, ಚಂದ್ರನಾಥ ಬಜಗೋಳಿ, ಸುಜಿತ್ ಕಾರ್ಕಳ, ದೇವದಾಸ್ ಕೆರೆಮನೆ, ಡಾ.ನರೇಂದ್ರ ಕಾಮತ್, ಜ್ಯೋತಿ ಗುರುಪ್ರಸಾದ್, ಇಕ್ಬಾಲ್ ಅಹಮದ್, ದಿನೇಶ್ ಶೆಟ್ಟಿ , ಗಣೇಶ್ ಜಾಲ್ಸೂರು, ಆಶಾ, ಪ್ರೇಮಾ , ಪ್ರತಿಮಾ ಎಸ್ , ಪೂರ್ಣಿಮಾ ಗೋರೆ , ವಂದನ ರೈ ನಲ್ಲೂರು , ನಿತ್ಯಾನಂದ ನಾಯಕ್ , ಸುರೇಶ್ ಪೂಜಾರಿ ಎಂ , ಜ್ಯೋತ್ಸ್ನಾ ಶೆಣೈ, ಶಿವಾನಂದ , ಶ್ರೀನಿವಾಸ ರಾವ್ , ಮಧುಶ್ರೀ, ಅಶ್ವಿನಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.