ಆ.25ರಂದು ಜಯಲಕ್ಷ್ಮೀ ಸಿಲ್ಕ್ಸ್ ಉಡುಪಿ ಶೋರೂಂ ಲೋಕಾರ್ಪಣೆ
ಉಡುಪಿ, ಆ.24: ಈವರೆಗೆ ಉದ್ಯಾವರದಲ್ಲಿದ್ದು ಜಿಲ್ಲೆಯಲ್ಲೇ ಅತ್ಯಂತ ಜನಪ್ರಿಯ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಚ್ಚುಮೆಚ್ಚಿನ ಜವುಳಿ ಮಳಿಗೆ ಏನಿಸಿದ್ದ ಜಯಲಕ್ಷ್ಮೀ ಸಿಲ್ಕ್ಸ್‌ನ ನೂತನ ಶೋರೂಂ ಇದೀಗ ಉಡುಪಿ ನಗರದ ಹೃದಯ ಭಾಗವಾದ ಬನ್ನಂಜೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಆ.25ರ ವರಮಹಾಲಕ್ಷ್ಮೀ ಪೂಜಾ ದಿನದಿಂದ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಉಡುಪಿ ಬನ್ನಂಜೆಯ ರಾಷ್ಟ್ರೀಯ ಹೆದ್ದಾರಿ 169ಎ ಸಮೀಪದಲ್ಲೇ ನಿರ್ಮಾಣಗೊಂಡಿರುವ ಜಯಲಕ್ಷ್ಮೀ ಸಿಲ್ಕ್ಸ್ ಸಮುಚ್ಛಯ ಒಟ್ಟು 1.10 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, 7 ಅಂತಸ್ತಿನ ಕಟ್ಟಡವಾಗಿದೆ. ಬೆಳೆಯುತ್ತಿರುವ ಉಡುಪಿ ಸೇರಿ ದಂತೆ ಜಿಲ್ಲೆ ಹಾಗೂ ಹೊರಜಿಲ್ಲೆಗಳ ಅಲ್ಲದೇ ದೇಶ-ವಿದೇಶಗಳ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅತ್ಯಾಧುನಿಕವಾಗಿ ವಿನೂತನ ಶೈಲಿಯಲ್ಲಿ ಮಳಿಗೆ ನಿರ್ಮಾಣಗೊಂಡಿದೆ.
1969ರಲ್ಲಿ ಉದ್ಯಾವರದಲ್ಲಿ ಎನ್. ವಾಸುದೇವ ಹೆಗಡೆ ಅವರು ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದ ಜಯಲಕ್ಷ್ಮೀ ಸಿಲ್ಕ್ಸ್, ನಗುಮೊಗದ ಸೇವೆಯೊಂದಿಗೆ ಹಂತ ಹಂತವಾಗಿ ಬೆಳೆದು ಉದ್ಯಾವರದಿಂದಲೇ ಇಡೀ ಜಿಲ್ಲೆಯ ಗ್ರಾಹಕರನ್ನು ಸೆಳೆದು ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು.ಇದೀಗ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಉದ್ದೇಶದೊಂದಿಗೆ ಉಡುಪಿಯ ಹೃದಯ ಭಾಗದಲ್ಲಿ ಮಳಿಗೆಯನ್ನು ತೆರೆದಿದೆ.
ಒಂದೇ ಸೂರಿನಡಿ ಎಲ್ಲವೂ ಲಭ್ಯ: ಜಯಲಕ್ಷ್ಮೀ ಸಿಲ್ಕ್ಸ್ ಸಮುಚ್ಛಯ ಏಳು ಅಂತಸ್ತುಗಳನ್ನು ಹೊಂದಿದ್ದು, ಇಡೀ ಕುಟುಂಬಕ್ಕೆ ಅಗತ್ಯವಿರುವ ಎಲ್ಲವೂ ಒಂದೇ ಸೂರಿನಡಿ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಅಗತ್ಯಕ್ಕೆ ತಕ್ಕಂತೆ ಬೇಕಾದ ವೈವಿಧ್ಯತೆ, ನಾವೀನ್ಯತೆಯೊಂದಿಗೆ ಎಲ್ಲವೂ ಲಭ್ಯವಾಗಲಿದೆ.
ನೆಲ ಅಂತಸ್ತಿನಲ್ಲಿ ಆರ್ಟ್ ಫ್ಯಾಶನ್ ಜುವೆಲ್ಲರಿ, ಬ್ರಾಂಡೆಡ್ ವಾಚ್‌ಗಳು, ಕೈಮಗ್ಗದ ವಿಭಾಗಗಳಿದ್ದರೆ, ಮೊದಲ ಅಂತಸ್ತಿ ನಲ್ಲಿ ಎಲ್ಲಾ ಶ್ರೇಣಿಯ ಸೀರೆಗಳು, ಲೆಹೆಂಗಾ, ಗಾಗ್ರಾಗಳಿರಲಿವೆ. ಎರಡನೇ ಅಂತಸ್ತಿನಲ್ಲಿ ಮದುವೆ ರೇಷ್ಮೆ ಸೀರೆಗಳ ದೊಡ್ಡ ಸಂಗ್ರಹವಿರುತ್ತದೆ.
ಇನ್ನು ಮೂರನೇ ಅಂತಸ್ತಿನಲ್ಲಿ ಮಹಿಳೆಯರಿಗೆ ಬೇಕಾದ ಅತ್ಯಾಧುನಿಕ ಸ್ಟೈಲ್‌ನ ಉಡುಪು, ರೇಡಿಮೆಡ್ ಉಡುಪುಗಳಿರು ತ್ತವೆ. ನಾಲ್ಕನೇ ಮಹಡಿಯಲ್ಲಿ ಯುವಕ-ಯುವತಿಯರಿಗೆ ಬೇಕಾದ ಎಲ್ಲಾ ವಿಧದ ಉಡುಗೆ-ತೊಡುಗೆಗಳಿರುತ್ತವೆ. ಐದನೇ ಅಂತಸ್ತಿನಲ್ಲಿ ಪುರುಷರಿಗಾಗಿ ಬ್ರಾಂಡೆಡ್ ಮೆನ್ಸ್‌ವೇರ್, ಶರ್ಟಿಂಗ್, ಸೂಟಿಂಗ್‌ಗಳ ಅಪಾರ ಸಂಗ್ರಹವಿದೆ.
ಫ್ಯಾಮಿಲಿ ಸ್ಟುಡಿಯೋ: ಮದುವೆ ಸೇರಿದಂತೆ ಮನೆಯಲ್ಲಿ ನಡೆಯುವ ಯಾವುದೇ ಶುಭ ಸಮಾರಂಭಗಳಿಗೆ ಕುಟುಂಬ ಸಮೇತರಾಗಿ ಬಟ್ಟೆ ಖರೀದಿಗೆ ಬರುವ ಗ್ರಾಹಕರ ಬೇಡಿಕೆಗೆ ಕ್ಷಣಾರ್ಧದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ 6 ಫ್ಯಾಮಿಲಿ ಸ್ಟುಡಿಯೋ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಗ್ರಾಹಕರು ತಮ್ಮ ಮನಸ್ಸಿಗೆ ಇಷ್ಟವಾಗಿಗುವ ಉಡುಪುಗಳ ನಾನಾ ಶ್ರೇಣಿಗಳನ್ನು ವೀಕ್ಷಿಸಿ ಖರೀದಿಸಬಹುದು.
ಇಲ್ಲಿ ಮಹಿಳೆಯರು ಬಯಸುವ ಕಾಂಚಿಪುರಂ, ಧರ್ಮಾವರಂ, ಮೈಸೂರು ಸಿಲ್ಕ್, ಪ್ರಿಂಟೆಡ್ ಸಿಲ್ಕ್ ಕಾಟನ್ ಸಿಲ್ಕ್ಸ್, ಬೆಂಗಾಲಿ ಕಾಟನ್ ಸಹಿತ ದೇಶದ ವಿವಿಧೆಡೆಗಳಲ್ಲಿ ತಯಾರಾಗುವ ಸೀರೆಗಳ ಬೃಹತ್ ಸಂಗ್ರಹವಿದೆ. ಮಹಿಳೆಯರ ಕುರ್ತಾ, ಬಾಟಂಗಳಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆಯೂ ಇಲ್ಲಿದೆ. ಪುರುಷರಿಗೂ ಅವರು ಬಯಸುವ ಎಲ್ಲಾ ಪ್ರಸಿದ್ಧ ಬ್ರ್ಯಾಂಡ್ ಗಳ ರೆಡಿಮೇಡ್ ಉಡುಪುಗಳ ಸಂಗ್ರಹವೂ ಜಯಲಕ್ಷ್ಮೀಯಲ್ಲಿದೆ. ಇಲ್ಲಿ ಮದುಮಕ್ಕಳಿಗೂ ಬೇಕಾಗಿರುವ ಎಲ್ಲಾ ಶೈಲಿಯ ಹಾಗೂ ಬ್ರ್ಯಾಂಡ್‌ಗಳ ಉಡುಪು ಲಭ್ಯವಿದ್ದು, ಇದಕ್ಕಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆಯಿದೆ.
700 ನುರಿತ ಸಿಬ್ಬಂದಿಗಳ ಸೇವೆ: ಜಯಲಕ್ಷ್ಮೀಯಲ್ಲಿ ಗ್ರಾಹಕರಿಗೆ ಎಂದಿನಂತೆ ನಗುಮೊಗದ ಹಾಗೂ ಗುಣಮಟ್ಟದ ಸೇವೆಯನ್ನು ನೀಡುವ ನಿಟ್ಟಿನಲ್ಲಿ 700 ಮಂದಿ ನುರಿತ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ವಾರದ 7 ದಿನವೂ ಉಡುಪಿ ಬನ್ನಂಜೆಯ ಜಯಲಕ್ಷ್ಮೀ ಮಳಿಗೆ ಬೆಳಗ್ಗೆ 9:30ರಿಂದ ರಾತ್ರಿ 8:30ರವರೆಗೆ ತೆರೆದಿರುತ್ತದೆ.
ಜಯಲಕ್ಷ್ಮೀ ಸಿಲ್ಕ್ಸ್ ಮಲ್ಪೆ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಾವಳಿ ಬೈಪಾಸ್ ಹಾಗೂ ಸಿಟಿ ಬಸ್ ನಿಲ್ದಾಣದಿಂದ ಅನತಿ ದೂರದಲ್ಲಿದೆ. ಈ ಕಟ್ಟಡದ ಸುತ್ತಲೂ ವಿಶಾಲ ಜಾಗವಿದ್ದು, ಏಕಕಾಲದಲ್ಲಿ 200 ಕಾರುಗಳ ಪಾರ್ಕಿಂಗ್‌ಗೆ ಬೇಕಾದ ಸೌಲಭ್ಯವಿದೆ.