ಸಮುದಾಯ ಬೆಳೆಯಲು ಸಂಘಟನೆ ಅಗತ್ಯ: ನರೇಂದ್ರ ಕೋಟ
ಕೋಟ: ಸಮಾಜದ ಬೆಳವಣಿಗೆ ಜನಾಂಗದ ಬೆಳವಣಿಗೆ ಜೊತೆ ಸಾಗಬೇಕು. ಯಾವುದೇ ಸಮುದಾಯ ಬೆಳೆಯಲು ಸಂಘ ಟನೆ ಅಗತ್ಯ. ಗಟ್ಟಿ ನಾಯಕತ್ವ ಸಮಾಜವನ್ನು ಮುನ್ನಡೆಸುತ್ತದೆ. ಯುವ ಜನಾಂಗ ಸಂಘ ಕಟ್ಟುವ ಕೆಲಸದಲ್ಲಿ ಮುಂದಾಗ ಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು ಎಂದು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಹೇಳಿದ್ದಾರೆ.
ಶಿರಿಯಾರ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಆಶ್ರಯದಲ್ಲಿ ಶಿರಿಯಾರ ಕೊಳ್ಳೆಬೈಲು ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಅವರ 170ನೆ ಜನ್ಮದಿನಾಚರಣೆ ಅಂಗವಾಗಿ ಸಾಮೂಹಿಕ ಗುರುಪೂಜೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಬಾಬು ನಾಯ್ಕ ಬಡಾಕೇರಿ, ಉಪಾಧ್ಯಕ್ಷ ಸಂಜೀವ ಪೂಜಾರಿ ಕೊಡಿಯಾರಮನೆ ಉದ್ಘಾಟಿಸಿದರು. ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಅಧ್ಯಕ್ಷ ತಿಮ್ಮ ಪೂಜಾರಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿದರು.
ಇದೇ ಸಂದರ್ಭ ಕೊಳ್ಕೆಬೈಲು ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ರ್ಚಕ ಗಿರಿಯ ಪೂಜಾರಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಬಾಬು ನಾಯ್ಕ ಬಡಾಕೇರಿ, ಶೇಖರ್ ಸುವರ್ಣ ಜೆಡ್ಡಿನಮನೆ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಪೂಜಾರಿ ಕುಂಬಾರಮಕ್ಕಿಜೆಡ್ಡು ವಹಿಸಿದ್ದರು. ಕೋಶಾಧಿಕಾರಿ ಹೆರಿಯ ಪೂಜಾರಿ, ಬ್ರಹ್ಮಾವರ ಸಮುದಾಯ ಕೇಂದ್ರದ ಮುಖ್ಯದಂತ ಆರೋಗ್ಯಾಧಿಕಾರಿ ಡಾ.ಪ್ರದೀಪ್ ಪೂಜಾರಿ ಕೆ., ಯುವ ವೇದಿಕೆ ಅಧ್ಯಕ್ಷ ಶರತ್ ಪೂಜಾರಿ ಜೆಡ್ಡಿನ ಮನೆ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಪೂಜಾರಿ ಭಟ್ರಮಕ್ಕಿ ಉಪಸ್ಥಿತರಿದ್ದರು.
ಸಂಘ ಶಿರಿಯಾರದ ಮಾಜಿ ಅಧ್ಯಕ್ಷ ಭಾಸ್ಕರ ಪೂಜಾರಿ ಸಕಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಪಡುಮುಂಡು ನಿರೂಪಿಸಿದರು. ಈಶ್ವರ ಪೂಜಾರಿ ವಂದಿಸಿದರು.