ಪಿಪಿಸಿ: ಮನು ಹಂದಾಡಿ ‘ಭಾಷೆ-ಬದುಕು-ಹಾಸ್ಯ’ ಕುರಿತು ಉಪನ್ಯಾಸ

Update: 2023-11-09 14:02 GMT

ಉಡುಪಿ, ನ.9: ಇಂದಿನ ವಿದ್ಯಾರ್ಥಿಗಳಿಗೆ ಭಾಷೆಯ ಅರಿವು ಅಗತ್ಯ. ಶಿಕ್ಷಣ ಪಡೆದು, ಉದ್ಯೋಗಸ್ಥರಾದ ಮೇಲೂ ತಮ್ಮ ಊರು, ಶಾಲೆ, ಶಿಕ್ಷಕರನ್ನು ಮರೆಯದೇ ಗೌರವಿಸುವವರು ನಿಜವಾದ ವಿದ್ಯಾವಂತರು ಎಂದು ಕುಂದಗನ್ನಡದ ರಾಯ ಭಾರಿ ಎಂದೇ ಪರಿಚಿತರಾಗಿರುವ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಹಾಸ್ಯ ಭಾಷಣಕಾರ ಮನು ಹಂದಾಡಿ ಹೇಳಿದ್ದಾರೆ.

ನಗರದ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ವೇದಿಕೆ ಹಾಗೂ ಕನ್ನಡ ವಿಭಾ ಗದ ಸಂಯೋಜನೆಯಲ್ಲಿ ಆಯೋಜನೆಗೊಂಡ ‘ಭಾಷೆ-ಬದುಕು-ಹಾಸ್ಯ’ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇತ್ತೀಚೆಗಿನ ದಿನಗಳಲ್ಲಿ ಸೋಯಲ್ ಮೀಡಿಯಾದಿಂದ ಭಾಷೆಯ ಮೇಲೆ ಗಂಭೀರ ಪರಿಣಾಮ ಆಗುತ್ತಿದೆ. ಭಾಷೆಯೊಂದಿಗೆ ಸಂಸ್ಕೃತಿ, ಸಂಸ್ಕಾರಗಳೂ ಅಳಿಯುತ್ತಿವೆ. ಆಧುನಿಕ ಯುಗದಲ್ಲಿ ಭಾಷೆಯನ್ನು ಎಲ್ಲಿ, ಹೇಗೆ ಬಳಸಬೇಕು ಎನ್ನುವ ಪರಿಜ್ಞಾನ ಇಲ್ಲದಿರುವುದೇ ಭಾಷೆಯ ಅಳಿನ ಮೂಲ ಕಾರಣವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕರಾದ ಡಾ. ವಿನಯ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕರಬ, ವಿದ್ಯಾರ್ಥಿ ವೇದಿಕೆ ಸಂಯೋಜಕರೂ, ಕನ್ನಡ ಉಪ ನ್ಯಾಸಕರೂ ಆದ ಶಿವಕುಮಾರ ಅಳಗೋಡು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಚೇತನಾ ಪೈ ಸ್ವಾಗತಿಸಿ, ಅನುಷಾ ಸಿ.ಹೆಚ್ ನಿರೂಪಿಸಿದರು. ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿ, ಸಾತ್ವಿಕ್ ಭಟ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News