ಉಡುಪಿ ನಗರದಲ್ಲಿ 16 ಮಂದಿ ಭಿಕ್ಷುಕರ ರಕ್ಷಣೆ
Update: 2023-09-03 14:58 GMT
ಉಡುಪಿ, ಸೆ.3: ಭಿಕ್ಷಾಟನಾ ನಿಷೇಧ ಕಾಯಿದೆ ಅನ್ವಯ ಭಿಕ್ಷಾಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೆ.2ರಂದು ಉಡುಪಿ ನಗರದ ವಿವಿಧೆಡೆ ಭಿಕ್ಷಾಟನೆ ನಡೆಸುತ್ತಿದ್ದ 16 ಮಂದಿ ನಿರಾಶ್ರೀತರನ್ನು ರಕ್ಷಿಸಲಾಗಿದೆ.
ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರು ಹಾಗೂ ಕಾರ್ಯಪಾಲಕ ಸಿಬ್ಬಂದಿ ವರ್ಗ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕಾರ ದೊಂದಿಗೆ ನಗರದ ಕೃಷ್ಣ ಮಠ, ಸರ್ವಿಸ್ ಬಸ್ ನಿಲ್ದಾಣ ಹಾಗೂ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆಯನ್ನು ಮಾಡುತಿದ್ದ 16 ಮಂದಿ ನಿರಾಶಿತರನ್ನು ರಕ್ಷಿಸಿ ಮಂಗಳೂರಿನ ಪಚ್ಚನಾಡಿ ಪರಿಹಾರ ಕೇಂದ್ರಕ್ಕೆ ಸೇರಿಸಲಾಗಿದೆ.
ಉಡುಪಿಯಲ್ಲಿ ಭಿಕ್ಷುಕರು ಬಿಕ್ಷಾಟನೆ ಮಾಡಿ ಸಾರಾಯಿ ಕುಡಿದು ಸಾರ್ವ ಜನಿಕರಿಗೆ ತೊಂದರೆ ಹಾಗೂ ಗಲಾಟೆ ಮಾಡಿ ಆಸ್ಪತೆಗೆ ದಾಖಲಾಗುವ ಘಟನೆ ದಿನಪ್ರತಿ ನಡೆಯುತ್ತಿದೆ. ಈ ಪ್ರಯುಕ್ತ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ಒಳಕಾಡು ತಿಳಿಸಿದರು.