ಫಾದರ್ ಮುಲ್ಲರ್ ಚಾಟರಿಟೇಬಲ್ ಸಂಸ್ಥೆ ವತಿಯಿಂದ 25 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಣೆ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ (ಎಫ್‌ಎಂಸಿಐ) ಇದರ ವತಿಯಿಂದ ವಾರ್ಷಿಕ ವಿದ್ಯಾರ್ಥಿವೇತನ ವಿತರಣೆ ಸೋಮವಾರ ಫಾದರ್ ಮುಲ್ಲರ್ ದಶಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರೆಸ್ ಮುಖ್ಯ ಅತಿಥಿಯಾಗಿದ್ದರು.
ಎಫ್‌ಎಂಸಿಐ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವತಿಯಿಂದ 25 ಲಕ್ಷ ರೂ.ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವ ಕನಸನ್ನು ನನಸಾಗಿಸಲು ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ,
ಎಫ್‌ಎಂಸಿಐ ನಿಯೋಜಿತ ನಿರ್ದೇಶಕರು ವಂ.ಫೌಸ್ಟಿನ್ ಲ್ಯೂಕಾಸ್ ಲೋಬೊ, ದೇರಳಕಟ್ಟೆ ಎಫ್‌ಎಂಎಚ್‌ಎಂಸಿ ಆ್ಯಂಡ್ ಎಚ್‌ನ ಆಡಳಿತಾಧಿಕಾರಿ ವಂ.ಅಜಿತ್ ಮಿನೇಜಸ್ ಆಡಳಿತಾದಿಕಾರಿ ವಂ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವಂ. ಜಾರ್ಜ್ ಜೀವನ್ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ವಂ. ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಡೀನ್ ಡಾ. ಆಂಟನಿ ಸಿಲ್ವಾನ್ ಡಿಸೋಜ, ಡೀನ್ ಡಾ. ವೆಂಕಟೇಶ ಬಿ.ಎಂ, ವಿವಿಧ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ. ಹಿಲ್ಡಾ ಡಿ’ಸೋಜ, ಪ್ರೊ. ಚರಿಷ್ಮಾ ಡಿ ಸಿಲ್ವಾ, ಭಗಿನಿ ಧನ್ಯ ದೇವಸಿಯಾ, ಡಾ. ಪ್ರಭು ಕಿರಣ್, ಡಾ. ವಿಲ್ಮಾಮೀರಾ ಡಿ’ಸೋಜ, ಪ್ರೊ. ಸಿಂಥಿಯಾ ಸಾಂತ್‌ಮೆಯರ್, ಡಾ. ಸತೀಶ್ ಎಸ್, ಡಾ. ಶಿವಶಂಕರ ಎ.ಆರ್. ತುಂಬೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ. ರಶ್ಮಿ ರಮೇಶ್ ಒ. ಕ್ರಿಸ್ಬೆಲ್ ರೊಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು. ಕಚೇರಿ ಅಧೀಕ್ಷಕಿ ಐಡಾ ಸಿಕ್ವೇರಾ , ಸಹಾಯಕ ಅಧೀಕ್ಷಕಿ ಮೀನಾ ಡಿ ಸೋಜ ಡೀನ್ ಎಫ್‌ಎಂಎಂಸಿ ಕಾರ್ಯದರ್ಶಿ ಜೆನ್ನಿಫರ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.

