ಸೋಲಾರ್ ದಾರಿದೀಪದ ಬ್ಯಾಟರಿ ಕಳವು

Update: 2023-10-03 15:49 GMT

ಶಿರ್ವ, ಅ.3: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಅಳವಡಿಸಲಾದ ಸೋಲಾರ್ ದಾರಿದೀಪದ ಲಕ್ಷಾಂತರ ರೂ. ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಗ್ರಾಪಂನಿಂದ 92 ಹೇರೂರು ಗ್ರಾಮದ ಹಾಲಿನ ಡೈರಿ ಬಳಿ, ಭವಾನಿ ಪೌಲ್ಟ್ರಿ ಫಾರ್ಮ್ ಬಳಿ, ಬಬ್ಬುಸ್ವಾಮಿ ದೈವಸ್ಥಾನದ ಬಳಿ, ಕಲ್ಲುಗುಡ್ಡೆ ಗರಡಿ ಬಳಿ ಮತ್ತು ಪಾದೂರು ಗ್ರಾಮದ ವಳದೂರು ಶ್ರೀಬಬ್ಬುಸ್ವಾಮಿ ದೈವಸ್ಥಾನದ ಬಳಿ ಅಳವಡಿಸಿದ ಒಟ್ಟು 15 ಸೊಲಾರ್ ದಾರಿದೀಪದ ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 1,42,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News