ಹೂಡೆಯ ಸಾಲಿಹಾತ್‌ನಲ್ಲಿ ಶಿಕ್ಷಕರ ದಿನಾಚರಣೆ
ಉಡುಪಿ, ಸೆ.6: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಮುಖ್ಯ ಶಿಕ್ಷಕ ದಿನಕರ ಶೆಟ್ಟಿ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಸಿಗುವ ಆತ್ಮತೃಪ್ತಿ ಇನ್ನೊಂದು ವೃತ್ತಿಯಲ್ಲಿ ಸಿಗುವುದಿಲ್ಲ. ಶಿಕ್ಷಕ ಕಾಲಮಾನಕ್ಕೆ ತಕ್ಕಂತೆ ವಿಷಯ ಜ್ಞಾನ ಪಡೆದುಕೊಂಡು, ಪ್ರಸಕ್ತ ಸನ್ನಿವೇಶಗಳ ಮೇಲೆ ಅವಲೋಕನ ಕಾರ್ಯ ಮಾಡುವಲ್ಲಿ ಕಾರ್ಯ ಪ್ರವೃತ್ತನಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಹಾತ್ ಶಾಲೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಆದಂ ಸಾಹೇಬ್, ಶಾಹಿಲಾ ಹನೀಫ್, ರೌನಕ್ ಬೇಗಂ, ಸುನಂದಾ, ಯಶೋಧಾ ಬಂಗೇರಇವರನ್ನುಸನ್ಮಾನಿಸಲಾಯಿತು. ಸ್ಥಳೀಯ ಶಾಲೆಗಳ ನಿವೃತ್ತ ಶಿಕ್ಷಕರಾದ ದಿನಕರ ಶೆಟ್ಟಿ ಹಾಗೂ ಲಲೀಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಸಾಲಿಹಾತ್ ಶಿಕ್ಷಣ ಸಂಸ್ಥೆ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಶಹನವಾಜ್ ವಹಿಸಿದ್ದರು. ಟ್ರಸ್ಟಿ ಆದಿಲ್, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪ್ರಾಂಶು ಪಾಲರುಗಳಾದ ಡಾ.ಸಬೀನಾ, ದಿವ್ಯಾ ಪೈ, ಮುಖ್ಯಶಿಕ್ಷಕರುಗಳಾದ ಸುನಂದಾ, ಶಾದತ್, ತಸ್ಮಿಯಾ ಉಪಸ್ಥಿತರಿದ್ದರು. ಶಿಕ್ಷಕಿ ನಂದಾ ಸ್ವಾಗತಿಸಿದರು. ಶಿಕ್ಷಕಿಯ ರಾದ ಆಶಾಲತಾ ಹಾಗೂ ಆಯಿಶಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅಸ್ಮಿಯಾ ವಂದಿಸಿದರು.