ಉಡುಪಿ: ಪಾರ್ಟ್‌ಟೈಮ್ ಜಾಬ್ ಹೆಸರಿನಲ್ಲಿ 52 ಲಕ್ಷ ರೂ. ವಂಚನೆ
Update: 2023-09-23 14:36 GMT
ಉಡುಪಿ, ಸೆ.23: ಆನ್‌ಲೈನ್‌ಲ್ಲಿ ಪಾರ್ಟ್ ಟೈಮ್ ಕೆಲಸ ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ (27) ಎಂಬವರಿಗೆ ವಾಟ್ಸಾಪ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪಾರ್ಟ್‌ಟೈಮ್ ಕೆಲಸದ ಬಗ್ಗೆ ಸಂದೇಶ ಕಳುಹಿಸಿದ್ದನು. ಅಮೆಝಾನ್ ಕಂಪೆನಿಯವರೆಂದು ಹೇಳಿ ಟಾಸ್ಕ್‌ಗಳನ್ನು ನೀಡಿ, ಟಾಸ್ಕ್‌ಗಳಿಗಾಗಿ ಹಣ ಪಾವತಿ ಸುವಂತೆ ತಿಳಿಸಿದ್ದನು. ಅದನ್ನು ನಂಬಿದ ರಾಘವೇಂದ್ರ, ಆ.3ರಿಂದ ಸೆ.23ರ ಅವಧಿಯಲ್ಲಿ ಒಟ್ಟು 52,13,359ರೂ. ಹಣವನ್ನು ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮುಖೇನ ವರ್ಗಾವಣೆಗೊಳಿಸಿದರು. ಆದರೆ ಆರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.