ಉಡುಪಿ: ಸ್ಟೇಟ್ ಬ್ಯಾಂಕಿನಲ್ಲಿ ನಿವೃತ್ತರ ಸಮ್ಮಿಲನ ಕಾರ್ಯಕ್ರಮ

Update: 2023-10-22 13:59 GMT

ಉಡುಪಿ, ಅ.22: ಭಾರತೀಯ ಸ್ಟೇಟ್ ಬ್ಯಾಂಕಿನ ಖಜಾನೆ ಶಾಖೆ(ಉಡುಪಿ ಅಜ್ಜರಕಾಡು)ಯಲ್ಲಿ ನಿವೃತ್ತಿ ವೇತನ ಪಡೆಯುವ ನಿವೃತ್ತರ ಮಿಲನ ಕಾರ್ಯ ಕ್ರಮವನ್ನು ಅ.20ರಂದು ಆಯೋಜಿಸಲಾಗಿತ್ತು.

ಬ್ಯಾಂಕಿನಿಂದ ನಿವೃತ್ತಿ ವೇತನ ಪಡೆಯುವವರ ಖಾತೆಗೆ ತಡೆ ಇಲ್ಲದೆ ವೇತನ ಜಮೆಯಾಗಲು 80, ಅದಕ್ಕಿಂತ ಹೆಚ್ಚಿನ ಪ್ರಾಯದವರು ಅಕ್ಟೋಬರ್ ತಿಂಗಳು ಹಾಗೂ ಉಳಿದವರು ನವೆಂಬರ್ ತಿಂಗಳ ಅಂತ್ಯದೊಳಗೆ ಜೀವಂತ ಪ್ರಮಾಣಿ ಪತ್ರ ಸಲ್ಲಿಸಲೇಬೇಕು. ಉಳಿತಾಯ ಮತ್ತು ಅಳವಡಿಸಿಕೊಂಡ ಇನ್ನಿತರ ಆರ್ಥಿಕ ವ್ಯವಹಾರದ ಖಾತೆಗೆ ಸಕಾಲದಲ್ಲಿ ನಾಮ ನಿರ್ದೇಶನ ಮಾಡಬೇಕೆಂದು ಪ್ರಾಂತೀಯ ಕಚೇರಿಯ ಮುಖ್ಯ ಪ್ರಬಂಧಕ ಅಶ್ವಿನಿ ಕುಮಾರ್ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಖಾ ಪ್ರಬಂಧಕ ಎನ್.ಸಂದೀಪ್ ಶೆಣೈ ಮಾತನಾಡಿ, ವಯೋ ಸಹಜವಾದ ಸಮಸ್ಯೆಯ ಹಿರಿಯ ನಾಗರಿಕರಾದ ನಿವೃತ್ತರು, ಬ್ಯಾಂಕಿಗೆ ಬಂದಾಗ ಸರಳವಾಗಿ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಬ್ಯಾಂಕಿನ ಸಹವರ್ತಿ ಕೃಷ್ಣ ಪೂಜಾರಿ, ನಿವೃತ್ತ ನೌಕರರ ಸಂಘದ ಮಾಜಿ ಪದಾಧಿಕಾರಿ ಶ್ರೀನಿವಾಸ ಶೆಟ್ಟಿ ತೋನ್ಸೆ ಮಾತನಾಡಿದರು. ಹಿರಿಯ ಸಹವರ್ತಿ ಸುಶ್ಮಾ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News