ಉಡುಪಿ ಧರ್ಮಪ್ರಾಂತ ಮಟ್ಟದ 18ನೇ ಕೊಂಕಣಿ ಗಾಯನ ಸ್ಪರ್ಧೆ: ಶಂಕರಪುರ ತಂಡ ಪ್ರಥಮ
ಉಡುಪಿ, ನ.3: ಶಂಕರಪುರದ ಸಂತ ಯೋವಾನ್ನರ ದೇವಾಲಯ, ಐಸಿವೈಎಂ ಪಾಂಗಾಳ ವತಿಯಿಂದ ಆಯೋಜಿಸಲಾದ 18ನೇ ಉಡುಪಿ ಧರ್ಮಪ್ರಾಂತ ಮಟ್ಟದ ಕೊಂಕಣಿ ಗಾಯನ ಸ್ಪರ್ಧೆಯಲ್ಲಿ ಶಂಕರಪುರದ ಸಂತ ಯೋವಾನ್ನರ ದೇವಾ ಲಯ ತಂಡ ಪ್ರಥಮ ಸ್ಥಾನ, ಫಾತಿಮಾ ಮಾತೆಯ ದೇವಾಲಯ ಪೆರಂಪಳ್ಳಿ ತಂಡ ದ್ವಿತೀಯ ಮತ್ತು ಹೋಲಿ ಕ್ರಾಸ್ ದೇವಾಲಯ ಬೈಂದೂರು ತಂಡ ತೃತೀಯ ಸ್ಥಾನ ಗಳಿಸಿದವು.
ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ವಂ. ಫರ್ಡಿ ನಾಂಡ್ ಗೊನ್ಸಾಲ್ವಿಸ್ ಅವರು ಸಂಘಟಕರನ್ನು ಮತ್ತು ಭಾಗವಹಿಸಿದವರನ್ನು ಶ್ಲಾಘಿಸಿದರು. ಶಂಕರಪುರ ದೇವಾಲಯಕ್ಕೆ ಈ ಕಾರ್ಯಕ್ರಮ ಮಹತ್ವಪೂರ್ಣವಾಗಿದ್ದು, ಉಡುಪಿ ಧರ್ಮಪ್ರಾಂತದ ವ್ಯಾಪ್ತಿಯಲ್ಲಿರುವ ಗಾಯಕರಿಗೆ ಅದ್ಬುತ ಅವಕಾಶ ಕಲ್ಪಿಸಿಕೊಟ್ಟಿದೆ.ಗಾಯನ ಪ್ರತಿಯೊಬ್ಬರಲ್ಲೂ ಇಲ್ಲದ ಅದ್ವಿತೀಯ ಪ್ರತಿಭೆ, ಸತತ ಪ್ರಯತ್ನದಿಂದ ಸುಧಾರಣೆ ಸಾಧ್ಯ ಎಂದರು.
ಸ್ಪರ್ಧೆಯನ್ನು ಉಡುಪಿ ಧರ್ಮಪ್ರಾಂತದ ಕುಲಪತಿ ವಂ.ರೋಶನ್ ಡಿಸೋಜಾ ಉದ್ಘಾಟಿಸಿ ಶುಭ ಹಾರೈಸಿದರು. ರಾಬಿನ್ ಸಿಕ್ವೇರಾ, ಕ್ಯಾರೋಲ್ ಸಿಕ್ವೇರಾ, ಜೋಸ್ನಾ ಫೆರ್ನಾಂಡಿಸ್, ಜೇಸನ್ ಲೋಬೋ, ಡೆಂಜಿಲ್ ಪಿರೇರಾ ಮತ್ತು ರೈನಾ ಸಿಕ್ವೇರಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕಾರ್ಯಕ್ರಮವನ್ನು ಜೆನಿಶಾ ಮೆಂಡೋನ್ಸಾ ನಿರ್ವಹಿಸಿದರು. ಜೋಯಲ್ ಕ್ಯಾಸ್ಟೆಲಿನೊ ವಂದಿಸಿದರು.
ಈ ಸಂದರ್ಭದಲ್ಲಿ ಶಂಕರಪುರ ದೇವಾಲಯದ ಪ್ರಧಾನ ಧರ್ಮಗುರು ಗಳಾದ ವಂ. ಪ್ರಕಾಶ್ ಅನಿಲ್ ಕ್ಯಾಸ್ತಲಿನೋ, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಶಿರ್ವ ದೇವಾಲಯದ ಪ್ರಧಾನ ಧರ್ಮ ಗುರು ವಂ.ಲೆಸ್ಲಿ ಡಿಸೋಜಾ, ಐಸಿವೈಎಂನ ಸಹ ನಿರ್ದೇಶಕ ವಂ. ವಿಜಯ್ ಡಿಸೋಜಾ, ಐಸಿವೈಎಂ ಶಿರ್ವ ವಲಯ ಅಧ್ಯಕ್ಷ ಅವಿಲ್ ನಜ್ರೆತ್, ಐಸಿವೈಎಂ ಸಂಚಾಲಕಿ ಅನಿತಾ ಡಿಸೋಜಾ, ವಿಕ್ಟರ್ ಮೆಂಡೋನ್ಕಾ, ಶಂಕರಪುರ ಐಸಿವೈಎಂ ಅಧ್ಯಕ್ಷ ಪ್ರಥಮ್ ಡಿಸೋಜಾ, ಕಾರ್ಯದರ್ಶಿ ಐನಿಷ್ ರೋಡ್ರಿಗಸ್ ಉಪಸ್ಥಿತರಿದ್ದರು.