ಅ.3ರ ಉಡುಪಿ ಜಿಲ್ಲೆ ಬಂದ್ ರದ್ದು: ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಒಕ್ಕೂಟ

Update: 2023-09-30 15:24 GMT

ಫೈಲ್‌ ಫೋಟೊ 

ಉಡುಪಿ, ಸೆ.30: ಪರವಾನಿಗೆ ರಹಿತ ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳನ್ನು ಮುಟ್ಟುಗೋಲು ಹಾಕಿ ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿ ರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರವು ಶನಿವಾರವೂ ಮುಂದು ವರೆದಿದೆ.

ಇಂದು ಕೂಡ ಕಟ್ಟಡ ಸಾಮಗ್ರಿ ಸಾಗಾಟವನ್ನು ಸ್ಥಗಿತಗೊಳಿಸಿ ನೂರಾರು ಸಂಖ್ಯೆಯ ಲಾರಿ ಹಾಗೂ ಟೆಂಪೋವನ್ನು ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ, ಕುಂದಾಪುರ ಕೋಟೇಶ್ವರ, ಹೆಮ್ಮಾಡಿ, ಕಾರ್ಕಳದ ರಸ್ತೆ ಬದಿಯಲ್ಲೂ ಸರತಿ ಸಾಲಿನಲ್ಲಿ ನಿಲ್ಲಿಸಲಾಗಿದೆ.

ಅ.3ರಂದು ಉಡುಪಿ ಜಿಲ್ಲೆಗೆ ರಾಜ್ಯಪಾಲರು‌ ಆಗಮಿಸುವ ಹಿನ್ನೆಲೆಯಲ್ಲಿ ಮತ್ತು ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಉಡುಪಿ ಜಿಲ್ಲೆ ಬಂದ್ ನಿರ್ಧಾರವನ್ನು ಕೈಬಿಡಲಾಗಿದೆ. ಆದರೆ ನಮ್ಮ‌ಮುಷ್ಕರ ಹಾಗೂ ಹೋರಾಟ ಗಳು ಮುಂದುವರೆಯಲಿದೆ ಎಂದು ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News