ಉಡುಪಿ ಜಿಲ್ಲಾ ಮಟ್ಟದ ಮುಕ್ತ ಈಜು ಸ್ಪರ್ಧೆಗೆ ಚಾಲನೆ

Update: 2023-10-15 13:13 GMT

ಮಣಿಪಾಲ: ಒಲಂಪಿಕ್ ಕ್ರೀಡಾಕೂಟದಲ್ಲಿ ಈಜಿಗೆ ವಿಶೇಷ ಮಹತ್ವವಿದ್ದು ಹಲವಾರು ವಿಭಾಗದಲ್ಲಿ ಇದರ ಸ್ಪರ್ಧೆ ನಡೆಯು ತ್ತದೆ ಎಂಟು ವರ್ಷಗಳ ಅವಧಿಯಲ್ಲಿ ಓರ್ವ ಕ್ರೀಡಾಳು ಹಲವಾರು ಪ್ರಶಸ್ತಿಗಳನ್ನು ಗಳಿಸುವ ಅವಕಾಶವಿದೆ ಎಂದು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಸಹ ಉಪ ಕುಲಪತಿ ಡಾ.ಶರತ್ ರಾವ್ ಹೇಳಿದ್ದಾರೆ.

ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಎಂಐಟಿ ಈಜುಕೊಳದಲ್ಲಿ ಡಾ.ಟಿ.ಎಂ.ಎ ಪೈ ಅವರ 125 ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಮುಕ್ತ ಈಜು ಪಂದ್ಯಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿ ದೇಶದ ಜನಸಂಖ್ಯೆಯ ಶೇ.50ಕ್ಕಿಂತಲೂ ಹೆಚ್ಚು ಭಾಗ ೨೫ ಕ್ಕಿಂತಲೂ ಕಡಿಮೆ ವಯಸ್ಸಿನ ಯುವ ಜನತೆಯ ಸಂಖ್ಯೆ ಇದ್ದು ಕ್ರೀಡೆಯಲ್ಲಿ ಉಜ್ವಲ ಭವಿಷ್ಯವನ್ನು ದೇಶ ವಿಶ್ವಮಟ್ಟದಲ್ಲಿ ಹೊಂದಿದೆ ಎಂದು ಅವರು ಹೇಳಿದರು.

ಈಜು ಪಂದ್ಯಕೂಟಕ್ಕೆ ಉಡುಪಿ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಎಂಐಟಿ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ ವಹಿಸಿದ್ದರು. ಎಂಐಟಿಯ ಕ್ರೀಡಾ ಸಹ ನಿರ್ದೇಶಕ ಡಾ.ಸ್ಯಾಮ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಡಾ.ನಾಗರಾಜ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸೆಲ್ವಕುಮಾರ್ ಸ್ವಾಗತಿಸಿದರು. ಎಂಐಟಿಯ ಕ್ರೀಡಾ ನಿರ್ದೇಶಕ ಡಾ.ಉಪೇಂದ್ರ ನಾಯಕ್ ವಂದಿಸಿದರು. ಡಾ.ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯಾದ್ಯಂತ ಸುಮಾರು ೨೦೦ಕ್ಕೂ ಹೆಚ್ಚು ಸ್ಪರ್ಧಿಗಳು ಈ ಪಂದ್ಯಕೂಟದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News