ಉಡುಪಿ ಜಿಲ್ಲಾಮಟ್ಟದ ಶಟ್ಲ್ ಪಂದ್ಯಾಟ: ಕಾರ್ಕಳ ಕ್ರೈಸ್ಟ್ ಕಿಂಗ್ ಶಾಲೆಗೆ ಸಮಗ್ರ ಪ್ರಶಸ್ತಿ

Update: 2024-08-28 15:09 GMT

ಉಡುಪಿ, ಆ.28: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಜಂಟಿ ಸಹಭಾಗಿತ್ವದಲ್ಲಿ ಇತ್ತೀಚೆಗೆ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ಜಿಲ್ಲಾ ಮಟ್ಟದ ಶೆಟ್ಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಮತ್ತು ಶಂಕರಪುರ ಸೈಂಟ್ ಜಾನ್ಸ್ ಶಾಲೆ ಶಂಕರಪುರ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿತು.

14ರ ಒಳಗಿನ ಬಾಲಕರ ವಿಭಾಗದಲ್ಲಿ ಅಶ್ವಿನ್ ಎ.ಶೆಟ್ಟಿ, ಪ್ರಜನ್ ಶೆಟ್ಟಿ, ಶಮಂತ್, ರಿಪ್ಟನ್ ಲೆನಾರ್ಡ್ ಸೆರಾವೋ ಮತ್ತು ಪ್ರೀತನ್ ಆಳ್ವ, ಬಾಲಕಿಯರ ವಿಭಾಗದಲ್ಲಿ ಖುಷಿ ಆರ್.ಶೆಟ್ಟಿ, ಸನಿಹ, ದಾರಿಣಿ ಉಪಾಧ್ಯ, ವಿಸ್ಮಿತಾ ಮತ್ತು ದೃತಿ ಆರ್. ಸಾಲಿಯಾನ್, 17ರ ಬಾಲಕರ ವಿಭಾಗದಲ್ಲಿ ಗೌರವ್ ಆರ್ ದೇವಾಡಿಗ, ಸಾವನ್ ಎಸ್.ವರ್ಮ, ಪ್ರಥಮ್ ಶೆಟ್ಟಿ, ಸುಶಾಂತ್ ರಾವ್ ಮತ್ತು ಪವನ್ ಕುಮಾರ್, ಬಾಲಕಿಯರ ವಿಭಾಗದಲ್ಲಿ ಗಣ್ಯಾ, ಪ್ರಾರ್ಥನಾ, ಅಪೂರ್ವ ಅನಘ ಮತ್ತು ಶ್ರೀನಿಶಾ ಪ್ರಶಸ್ತಿ ಪಡೆದುಕೊಂಡರು. ಇವರು ವಿಭಾಗ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಗಳಿಸಿದರು.

ಪಂದ್ಯಾಟವನ್ನು ಉಡುಪಿ ನಗರಸಭಾ ಸದಸ್ಯೆ ರಶ್ಮಿ ಸಿ.ಭಟ್ ಉದ್ಘಾಟಿಸಿ ದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ಬ್ಲೂ ಟೂತ್ ಆಸ್ಪತ್ರೆಯ ಡಾ.ರಾಧಿಕಾ ಸೋಮಯಾಜಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲೂಯಿಸ್ ಲೋಬೋ, ಲೆಸ್ಲಿ ಕರ್ನೇಲಿಯೋ, ಪ್ರಕಾಶ್ ಭಟ್, ಜಿಲ್ಲಾ ದೈಹಿಕ ಶಿಕ್ಷಣಾಧಿ ಕಾರಿ ಚಂದ್ರಶೇಖರ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷೆ ನವ್ಯ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರವೀಂದ್ರ ನಾಯಕ್, ರವಿಚಂದ್ರ ಕಾರಂತ್, ಸಾಫಲ್ಯ ಟ್ರಸ್ಟ್‌ನ ನಿರೂಪಮಪ್ರಸಾದ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲೆ ಹರಿಣ, ಹಂಸವತಿ, ತಾರಾದೇವಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಿಜಯಕುಮಾರ್ ಶೆಟ್ಟಿ, ಚಂದ್ರಶೇಖರ ಸುವರ್ಣ, ಸತೀಶ್ ಸಾಲಿಯಾನ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಬೋವಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News