ಉಡುಪಿ: ಇನ್ನೂ ಎರಡು ದಿನ ಉತ್ತಮ ಮಳೆಯ ಮುನ್ಸೂಚನೆ

Update: 2023-11-06 16:03 GMT

ಉಡುಪಿ, ನ.6: ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಉತ್ತಮ ಮಳೆ ಬೀಳುವ ಮುನ್ಸೂಚನೆಯನ್ನು ಬೆಂಗಳೂರಿನ ಹವಾಮಾನ ಕೇಂದ್ರ ನೀಡಿದೆ. ನವೆಂಬರ್ 7 ಮತ್ತು 8ರಂದು ಕರಾವಳಿ ಜಿಲ್ಲೆಗಳ ಅಲ್ಲಲ್ಲಿ 64.5ಮಿ.ಮೀ.ನಿಂದ 115.5 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಉತ್ತಮ ಮಳೆ: ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಇಂದು ಸಹ ಮೋಡ ಕವಿದ ವಾತಾವರಣವಿದ್ದರೂ ಹೆಚ್ಚಿನ ಕಡೆಗಳಲ್ಲಿ ಮಳೆಯಾಗಿಲ್ಲ.

ಇಂದು ಬೆಳಗ್ಗೆ 8:30ಗಂಟೆಗೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 54.5ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ 57.6, ಕುಂದಾಪುರದಲ್ಲಿ 56.8, ಉಡುಪಿ 51.5, ಬೈಂದೂರು 46.4, ಬ್ರಹ್ಮಾವರ 64.0, ಕಾಪು 69.3 ಹಾಗೂ ಹೆಬ್ರಿಯಲ್ಲಿ 41.7ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News