ಉಡುಪಿ: ಕಳ್ಳತನ ಮಾಡಿದ ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

Update: 2023-09-29 15:34 GMT

ಉಡುಪಿ, ಸೆ.29: ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಆರೋಪಿಗಳಿಗೆ ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

2015ರ ಡಿಸೆಂಬರ್ 26ರಂದು ರಾತ್ರಿ 2:30ರ ಸುಮಾರಿಗೆ ಅಬ್ದುಲ್ ಖಾದರ್ ಅಲಿಯಾಸ್ ಎ.ಬಿ.ಅಬೂಬಕ್ಕರ್ ಹಾಗೂ ಅಝೀಝ್‌ ಅಲಿಯಾಸ್ ಬೊಂಡಾ ಅಝೀಝ್‌ ಎನ್ನುವವರು ಎಲ್ಲೂರು ಗ್ರಾಮದ ಅದಮಾರು ಎಂಬಲ್ಲಿರುವ ಪಿ. ಜನಾರ್ಧನ ರಾವ್ ಎನ್ನುವವರ ಮನೆಯ ಬಾಗಿಲಿನ ಚಿಲಕವನ್ನು ತೆಗೆದು, ಅಕ್ರಮವಾಗಿ ಮನೆಯ ಒಳಗೆ ಪ್ರವೇಶಿಸಿ, ಬೆಡ್ ರೂಮಿನ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದರು. ಈ ಬಗ್ಗೆ ಪಡುಬಿದ್ರೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್ ಯೋಗೀಶ್ ಅವರು ಇಬ್ಬರೂ ಆರೋಪಿಗಳಿಗೆ ತಲಾ ಎರಡು ತಿಂಗಳ ಜೈಲು ಶಿಕ್ಷೆ ಹಾಗೂ ಒಟ್ಟು 40,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಬದರೀನಾಥ್ ನಾಯರಿ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News