ಉಡುಪಿ: ರೈಲಿನಲ್ಲಿ ಚಿನ್ನಾಭರಣ ಕಳವು; ಆರೋಪಿಯ ಬಂಧನ

Update: 2023-10-06 16:13 GMT

ಉಡುಪಿ, ಅ.6: ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತ್ರಿಶೂರಿನಿಂದ ಮುಂಬೈಗೆ ಪ್ರಯಾಣಿಸುತಿದ್ದ ಮಹಿಳೆಯ ಚಿನ್ನಾಭರಣ, ಕಾರ್ಡ್‌ಗಳು, ನಗದು ಇತ್ಯಾದಿ ವಸ್ತುಗಳಿದ್ದ ಬ್ಯಾಗ್‌ನ್ನು ಕಳವು ಮಾಡಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಉಡುಪಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಹೊಸದಿಲ್ಲಿ ಮೂಲದ ಸನ್ನಿ ಮಲ್ಪೋತ್ರಾ(30) ಎಂದು ಗುರುತಿಸಲಾಗಿದೆ. ಆತನಿಂದ ಕಳವುಗೈದ ಸೊತ್ತುಗಳಲ್ಲಿ 4.67ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಲ್ಯಾಣಿ ಬಾಲಕೃಷ್ಣನ್ ಎಂಬುವವರು ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಅ.4ರಂದು ಪ್ರಯಾಣಿಸುತ್ತಿದ್ದು, ರಾತ್ರಿ 10:10ರ ಸುಮಾರಿಗೆ ರೈಲು ಮಂಗಳೂರು ಸಮೀಪ ತೋಕೂರು ರೈಲ್ವೇ ನಿಲ್ದಾಣದ ಹತ್ತಿರ ನಿಧಾನಗತಿಯಲ್ಲಿ ಸಂಚರಿಸುತ್ತಿರು ವಾಗ ಯಾರೋ ಕಳ್ಳರು ಕಲ್ಯಾಣಿ ಬಾಲಕೃಷ್ಣರವರ ಬ್ಯಾಗನ್ನು ಕಳವು ಮಾಡಿದ್ದರು. ಬ್ಯಾಗ್‌ನಲ್ಲಿ 127 ಗ್ರಾಂ ತೂಕದ ಚಿನ್ನಾಭರಣಗಳು, ಮೊಬೈಲ್, ಹ್ಯಾಂಡ್ ಬ್ಯಾಗ್, ಎಸ್‌ಬಿಐ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಕನ್ನಡಕ ಇತ್ಯಾದಿ ವಸ್ತುಗಳಿದ್ದು, ಅದರ ಒಟ್ಟು ಮೌಲ್ಯ 6,70,000ರೂ. ಆಗಿತ್ತು. ಈ ಬಗ್ಗೆ ಅವರು ಆಗಲೇ ಟಿಟಿ ಮೂಲಕ ದೂರು ದಾಖಲಿ ಸಿದ್ದು, ಉಡುಪಿಯ ರೈಲ್ವೆ ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದರು.

ಅಂದೇ ರಾತ್ರಿ 11:40 ಗಂಟೆಗೆ ಟಿಟಿ ಚಂದ್ರಕಾಂತ ಶೇಟ್ ಅವರು ಉಡುಪಿ ರೈಲ್ವೇ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಶ್ರೀಕಾಂತ್ ಅವರಿಗೆ ಕಳವು ಬಗ್ಗೆ ಮಾಹಿತಿ ನೀಡಿದ್ದರು. ಶ್ರೀಕಾಂತ್ ಅವರು ರಾತ್ರಿ 11:55ರ ಸುಮಾರಿಗೆ ಉಡುಪಿ ರೈಲ್ವೇ ಪ್ಲ್ಯಾಟ್ ಫಾರಂನಲ್ಲಿ ಅನುಮಾನಾಸ್ಪದವಾಗಿ ಇದ್ದ ಸನ್ನಿ ಮಲ್ಹೋತ್ರಾ ಎಂಬಾತನನ್ನು ಪತ್ತೆ ಹಚ್ಚಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಹಾಜರುಪಡಿಸಿದ್ದರು.

ಆತನನ್ನು ತಪಾಸಣೆ ನಡೆಸಿದಾಗ ಕಳವಾದ ಸ್ವತ್ತಿನ ಪೈಕಿ ಆರೋಪಿಯ ವಶದಲ್ಲಿರುವ 93.17 ಗ್ರಾಂ ಚಿನ್ನಾಭರಣ, ನಗದು ರೂಪಾಯಿ 3,700ರೂ ಹಾಗೂ ಕಲ್ಯಾಣಿ ಬಾಲಕೃಷ್ಣ ಅವರ ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆದು ಆರೋಪಿ ಯನ್ನು ಮಣಿಪಾಲ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದರು. ಆರೋಪಿಯಿಂದ ವಶಪಡಿಸಲಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂಪಾಯಿ 4,67,620ರೂ. ಆಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News